ಪ್ರಿಯಾಂಕ ಚೋಪ್ರ ಈಗ ಜಯಲಲಿತಾ ಮೇಡಂ ಜಿ
, ಸೋಮವಾರ, 10 ಮಾರ್ಚ್ 2014 (10:44 IST)
ಪ್ರಿಯಾಂಕ ಚೋಪ್ರಾಗೆ ಸಿಕ್ಕಾಪಟ್ಟೆ ಖುಷಿ ಮತ್ತು ಅಷ್ಟೇ ಪ್ರಮಾಣದ ಟೆನ್ಶನ್ ಆಗಿದೆ. ಅದಕ್ಕೆ ಕಾರಣಗಳು ಆಕೆಯ ಹೊಸ ಸಿನಿಮಾಗಳು. ಈ ನಟಿಗೆ ಈಗ ಇಬ್ಬರು ಸಾಧಕ ಹೆಣ್ಣುಮಕ್ಕಳ ಪಾತ್ರ ಮಾಡುವ ಅವಕಾಶ. ಅವರಿಬ್ಬರೂ ಜಗತ್ ಪ್ರಸಿದ್ಧರು.ಆ ಪಾತ್ರದಲ್ಲಿ ಸ್ವಲ್ಪ ಏರುಪೇರಾದರೂ ತನ್ನ ಬಗ್ಗೆ ತೀಕ್ಷ್ಣವಾದ ಟೀಕೆಗಳು ನಿಶ್ಚಿತ ಎನ್ನುವುದು ಗೊತ್ತು ಪಿಗ್ಗಿಗೆ. ಆಕೆ ಈಗ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೊಮ್ ಅವರ ಬದುಕನ್ನು ಆಧರಿಸಿದ ಚಿತ್ರದಲ್ಲಿ ಮೇರಿ ಕೊಮ್ ಪಾತ್ರದಲ್ಲಿ ಕಾಣಸಿಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಿಗ್ಗಿ ಸಿಕ್ಕಾಪಟ್ಟೆ ಸಾಧನೆ ಮಾಡುತ್ತಿದ್ದಾರೆ.
ಇದೆ ಸಮಯದಲ್ಲಿ ಆಕೆಗೆ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿದೆ. ಆ ಚಿತ್ರ ಪ್ರಸಿದ್ಧ ರಾಜಕೀಯ ವ್ಯಕ್ತಿತ್ವ ಆಗಿದೆ. ಆಕೆ ನಟಿಯಾಗಿ ತನ್ನ ಬದುಕು ಆರಂಭಿಸಿ ಆ ಬಳಿಕ ತಾನು ರಾಜಕೀಯ ಪಟುವಾಗಿ ಬದಲಾದ ವ್ಯಕ್ತಿತ್ವದ ಪಾತ್ರವನ್ನು ಮಾಡುವ ಅವಕಾಶ ಪಡೆದಿದ್ದಾರೆ. ಮಧುರ ಭಂಡಾರ್ಕರ್ ಅವರ ಮೇಡಂ ಜಿ ಚಿತ್ರದಲ್ಲಿ ಆಕೆಗೆ ಅವಕಾಶ ದೊರಕಿದೆ.ಮಾಜಿ ನಟಿ , ಈಗಿನ ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಬದುಕನ್ನು ಆಧರಿಸಿದ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ ಅವರಿಗೆ ಜಯಲೈತಾ ಪಾತ್ರ ಮಾಡುವ ಅವಕಾಶ ದೊರಕಿದೆಯಂತೆ. ಇದರಿಂದ ರೋಮಾಂಚಿತರಾಗಿರುವ ಪಿಗ್ಗಿ ಅದಕ್ಕೆಂದು ಸಹ ತಾಲೀಮು ನಡಿಸಲು ಸಿದ್ಧ ಆಗುತ್ತಿದ್ದಾರೆ . ಮಧುರ್ ಫ್ಯಾಶನ್ ಚಿತ್ರದ ಬಳಿಕ ಮತ್ತೆ ಪ್ರಿಯಾಂಕಾಗೆ ಅವಕಾಶ ನೀಡಿದ್ದಾರೆ. ಸಾಮಾನ್ಯವಾಗಿ ಒಬ್ಬರಿಗೆ ಒಮ್ಮೆ ಅವಕಾಶ ನೀಡುವ ಮಧುರ್ ಪ್ರಿಯಾಂಕ ಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ!