Publish Date: Fri, 08 Nov 2013 (16:47 IST)Updated Date: Fri, 08 Nov 2013 (16:47 IST)
PR
ಮಹೇಶ್ ಬಾಬು ಮತ್ತು ಸೀನು ವೈತ್ಲ ಮತ್ತೊಮ್ಮೆ ಜೋಡಿ ಆಗುತ್ತಿದ್ದಾ ರೆ. ಆ ಚಿತ್ರದ ಹೆಸರು ಆಗಡು. ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತು. ಚಿತ್ರವೂ ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ.
ಈ ಚಿತ್ರದ ಮುಖ್ಯ ಆಕರ್ಷಣೆಗಳಲ್ಲಿ ಒಂದು ಅಂದ್ರೆ ನಟ ರಾಜೇಂದ್ರ ಪ್ರಸಾದ್ ನಟನೆ. ಭಿನ್ನ ಮ್ಯಾನರಿಸಂ ಮೂಲಕ ಅಪಾರ ಸಂಖ್ಯೆಯ ಜನಾಕರ್ಷಣೆ ಪಡೆದ ನಟ ರಾಜೇಂದ್ರ ಪ್ರಸಾದ್ ತೆಲುಗು ಚಿತ್ರರಂಗದ ನೋ ಲಾಸ್ ನೋ ಗೈನ್ ನಟ. ಅವರ ಮೇಲೆ ಹಾಕಿದ ದುಡ್ಡಿಗೇನೂ ಮೋಸ ಆಗಿಲ್ಲ . ಈಗ ಅವರು ಆಗಡು ನಲ್ಲಿ ಹೊಸ ರೂಪದಿಂದ ಎಂಟ್ರಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಅಂದ್ರೆ ಮಹೇಶ್ ಅವರಿಗೆ ಅಪ್ಪನ ಸ್ಥಾನ ತುಂಬೋದು.. ಈ ಮೂಲಕ ಈ ನಟ ತಮ್ಮ ತಾರಾ ಬದುಕಲ್ಲಿ ಮತ್ತೊಂದು ಮಜಲಿಗೆ ಎಂಟ್ರಿ ಆಗಿದ್ದಾರೆ. ಅಂದಂಗೆ ಈ ಚಿತ್ರದ ಮೂಲಕ ಮಹೇಶ್ ಬಾಬು ಮತ್ತು ರಾಜೇಂದ್ರ ಪ್ರಸಾದ ಮೊತ್ತ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಜೊತೆ ತಮನ್ನಾ ಸಹ ಇದ್ದಾಳೆ.