Select Your Language

Notifications

webdunia
webdunia
webdunia
webdunia

ಪೋಲಿ ಪೂನಂ ವೆಬ್ ಹ್ಯಾಕ್ ಆಗಿದೆ..!

ಪೂನಂ
, ಮಂಗಳವಾರ, 1 ಏಪ್ರಿಲ್ 2014 (12:29 IST)
ಬಾಲಿವುಡ್ ಹಾಟ್ ಅಂಡ್ ಸೆಕ್ಸಿ ನಟಿ ಪೂನಂ ಪಾಂಡೆಯ ಕಾಲವೇ ಸರಿಯಿಲ್ಲ ಎಂದು ಕಾಣುತ್ತದೆ. ಆಕೆಗೆ ಈ ವರ್ಷದ ಆರಂಭದಿಂದಲೂ ಕಷ್ಟಗಳ ಸುರಿಮಳೆ. ಯಾಕೆ ಹೀಗೆ ಹೇಳುತ್ತಿದ್ದೇವೆ ಎಂದರೆ . ಸೆಕ್ಸಿ ಪೂನಂ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ. ಈ ಸಂಗತಿಯನ್ನು ಮೀಡಿಯಾದವರ ಮುಂದೆ ಹೇಳಿ ಗೋಳಾಡಿ ದ್ದಾಳೆ . ಬಟ್ಟೆ ಬಿಚ್ಚಿ ಎಲ್ಲರಿಗು ತೋರಿಸಿ ತನ್ನ ದೇಹದಲ್ಲಿ ಉಳಿದಿಲ್ಲ ಏನು ಅಂತ ಸಾಬೀತು ಮಾಡಿರುವ ಈ ಹೆಣ್ಣು ವೆಬ್ ಸೈಟ್ ನಲ್ಲೂ ಸಹ ಅದೇ ಕಥೆ ಅದೇ ಮೈ ತೋರುತ್ತಾ ಬದುಕಿದ್ದಾಳೆ. ಅಂತಹದನ್ನು ಹ್ಯಾಕ್ ಮಾಡಿದ್ದಾರಲ್ಲ ಈ ಮಹನೀಯರು ಎನ್ನುವ ಆಶ್ಚರ್ಯ ಆಗುವುದು ಸಹ,ಇದಕ್ಕೆ ಸಂಬಂಧ ಪಟ್ಟಂತೆ ಆಕೆ ಮುಂಬೈ ಸೈಬರ್ ಕ್ರೈಮ್ ಗೆ ತಿಳಿಸಿದ್ದಾಳೆ ಅಲ್ಲದೆ,ಅದನ್ನು ಆಕೆ ಟ್ವೀಟ್ ಮಾಡಿಯೂ ಸಹ ಹೇಳಿದ್ದಾಳೆ.

ಸಿಕ್ಕಾಪಟ್ಟೆ ದುಡ್ಡು ಸಿಗುತ್ತದೆ ಎಂದು ಬೆಂಗಳೂರಿಗೆ ನ್ಯೂ ಇಯರ್ ಪಾರ್ಟಿಗೆ ಬಂದಿದ್ದ ಪೂನಂ ಳನ್ನು ಇಲ್ಲಿನ ಬಾಯ್ಸ್ ಕುಡಿದ ಮತ್ತಿನಲ್ಲಿ ಎಳೆದಾಡಿದ್ದರು. ಆಕೆಯ ಸ್ಪರ್ಶ ಸುಖಕ್ಕೆ ಹಾತೊರೆದಿದ್ದರು.ಆಕೆಯನ್ನು ಯಾರಿಗೂ ರಕ್ಷಿಸಲು ಆಗಲಿಲ್ಲ, ಅವರಿಂದ ಬಿಡಿಸಲು ಹರಸಾಹಸ ಮಾಡ ಬೇಕಾಯಿತು ಎನ್ನುವ ಸಂಗತಿಯನ್ನು ಎಲ್ಲ ಮುಂದೆ ಹೇಳಿ ಬೇಜಾರಾಗಿದ್ದಳು ಈಕೆ. ಬೆಂಗಳೂರಿನಲ್ಲಿ ಪರ್ಫಾರ್ಮೆನ್ಸ್ ನೀಡಲು ಯಾಕೆ ಒಪ್ಪಿದೆನೊ ಎಂದುಬೇಸರ ಪಟ್ಟಿದ್ದೆ ಎನ್ನುವ ಮಾತನ್ನು ಸಹ ಆಕೆ ಮೀಡಿಯಾ ಮಂದಿ ಮುಂದೆ ಹೇಳಿದ್ದಳು.

ಅದೇ ರೀತಿ ಪೂನಂ ಮೇಲೆ ಕಾನೂನು ಕ್ರಮವು ಜರಗುವಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ಭಾರತ ವಿಶ್ವಕಪ್ ಆಡುವಾಗ ಗೆದ್ದರೆ ಬಟ್ಟೆ ಬಿಚ್ಚಿ ಓಡ್ತೀನಿ ಮೈದಾನದಲ್ಲಿ ಎನ್ನುವ ಮಾತು ಹೇಳಿ ನ್ಯಾಯಲಯದ ಕೆಂಗಣ್ಣಿಗೆ ಗುರಿ ಆಗಿದ್ದಳು. ಈಗ ಆಕೆಯ ವೆಬ್ ಹ್ಯಾಕ್ ಆಗಿದೆ.

Share this Story:

Follow Webdunia kannada