Publish Date: Tue, 24 Jul 2007 (11:16 IST)
Updated Date: Tue, 24 Jul 2007 (11:15 IST)
ತಮಿಳು ಸಿನಿರಂಗದಲ್ಲಿ ಸೂಪರ್ಹಿಟ್ ಆಗಿದ್ದ 'ಪೋಕಿರಿ' ಹಿಂದಿ ಅವತರಣಿಕೆ ಸಿದ್ಧವಾಗುತ್ತಿದೆ. ಇದರಲ್ಲಿ ಚಿಗರೆ ಕಂಗಳ ಚೆಲುವೆ ಆಯೆಷಾ ತಾಕಿಯಾ, ಹೀಮ್ಯಾನ್ ಸಲ್ಮಾನ್ ಖಾನ್‌ಗೆ ಜೊತೆಯಾಗುತ್ತಿದ್ದಾರೆ.
ಬೋನಿಕಪೂರ್ ಅವರ ನಿರ್ಮಾಣದಲ್ಲಿ ತಯಾರುತ್ತಿರುವ ಪ್ರಸ್ತುತ ಚಿತ್ರಕ್ಕಾಗಿ ಸಲ್ಮಾನ್ ನಾಯಕ ನಟ ಎಂಬುದು ಈಗಾಗಲೇ ನಿರ್ಧರಿತ ವಿಷಯ.
ಆದರೆ ಚಿತ್ರದ ನಾಯಕಿಗಾಗಿ ಬೋನಿ ಬಹಳಷ್ಟು ತಲೆ ಕೆಡಿಸಿಕೊಂಡಿದ್ದರು. ಅರ್ಹ ನಾಯಕಿಗಾಗಿ ಬೆಡಗಿಯರ ಗುಂಪುಗಳಲ್ಲಿ ಹುಡುಕುತ್ತಾ ಅಲೆದಾಡಿದ್ದರು. ಕೊನೆಗೆ ಆಯೆಷಾ ಹೆಚ್ಚು ಅರ್ಹ ಎಂದು ನಿರ್ಧರಿಸಿದ್ದಾರೆ.
ಬೋನಿಕಪೂರ್ ಅವರ ಆಯ್ಕೆಯಲ್ಲಿದ್ದ ಹೆಸರುಗಳಲ್ಲಿ ಕಂಗನಾ ರಾನಟ್, ದೀಪಿಕಾ ಪಡುಕೋಣೆ ಮುಂತಾದವರೂ ಇದ್ದರು. ಆಯೆಷಾಳನ್ನು ಆರಿಸಲು ಪ್ರಮುಖ ಕಾರಣವೆಂದರೆ ಆಕೆಯೊಳಗೆ ಬಳಸದೇ ಉಳಿದಿರುವ ಪ್ರತಿಭೆ ಇನ್ನೂ ಇದೆ, ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಎಂದು ಬೋನಿ ಹಾಗೂ ಶ್ರೀದೇವಿ ದಂಪತಿ ತಿಳಿಸಿದ್ದಾರೆ.