Select Your Language

Notifications

webdunia
webdunia
webdunia
webdunia

ಪೊಲೀಸ್ ಸ್ಟೇಶನ್ ಗೆ ಹೋಗೋಕೆ ನನಗೆ ಟೈಮಿಲ್ಲ ಅಂದ್ಲು ಶರ್ಲಿನ್ ಚೋಪ್ರ!

ಕಾಮಸೂತ್ರ ತ್ರಿ ಡಿ
, ಶನಿವಾರ, 5 ಏಪ್ರಿಲ್ 2014 (14:14 IST)
ಶರ್ಲಿನ್ ಕಾಮಸುತ್ರದ ನಿರ್ದೇಶಕ ರೂಪೇಶ್ ಪಾಲ್ ಮೇಲೆ ಕೇಸ್ ದಾಖಲಿಸಿದ್ದ ಬಗ್ಗೆ ನಿನ್ನೆ ಹೇಳಿದ್ದೆವು. ಈ ಹಾಟ್ ಬ್ಯೂಟಿಗೆ ನಿರ್ದೇಶಕ ನೀಡಿದ ಕಿರುಕುಳದಿಂದ ಈಕೆ ಸಂತ ಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.

ಕಾಮಸೂತ್ರ ತ್ರಿ ಡಿಚಿತ್ರದಲ್ಲಿ ನಟಿಸಿರುವ ತನಗೆ ರೆಮ್ಯುನರೆಶನ್ ಹೇಳಿದಷ್ಟು ನೀಡಿಲ್ಲ, ಅಲ್ಲದೆ ತನ್ನನ್ನು ನಿರ್ದೇಶಕ ಲೈಂಗಿಕವಾಗಿ ಹಿಂಸೆ ಮಾಡಿದ್ದಲ್ಲದೆ, ಏಳು ಲಕ್ಷ ರೂಪಾಯಿಗಳ ರೆಮ್ಯುನರೆಶನ್ ನೀಡದಂತೆ ಮಾಡುತ್ತೇನೆ ಎನ್ನುವ ಬೆದರಿಕೆ ಮಾಡಿದ್ದಾರೆ, ಎನ್ನುವ ಆರೋಪಣೆಗಳು ಈ ದೂರಿನಲ್ಲಿದೆ ಎನ್ನುವ ಸಂಗತಿಯನ್ನು ಪೊಲೀಸರು ತಿಳಿಸಿದ್ದಾರೆ.

ಶರ್ಲಿನ್ ಸೆಕ್ಸಿ ಚಿತ್ರಗಳು, ವಿಡಿಯೋಗಳನ್ನು ಕಾಮ ಸೂತ್ರ ಚಿತ್ರದಲ್ಲಿ ಬಳಸಿಕೊಳ್ಳದೆ ಗ್ಲೋಬಲ್ ಕಮರ್ಷಿಯಲ್ ಸೆಕ್ಸ್, ಪೋರ್ನ್ ಮಾರುಕಟ್ಟೆಯಲ್ಲಿ ಮಾರುತ್ತೇನೆ ಎನ್ನುವ ಬೆದರಿಕೆಯನ್ನು ಸಹ ಒಡ್ಡಿರುವ ಬಗ್ಗೆಯೂ ಸಹ ದೂರಿನಲ್ಲಿ ದಾಖಲಾಗಿದೆ. ಕಾಮಸೂತ್ರ ಚಿತ್ರದಲ್ಲಿ ತನ್ನ ಬದಲಾಗಿ ಬೇರೆಯವರನ್ನು ತೆಗೆದು ಕೊಳ್ಳುವುದಾಗಿ ಸಹ ಬೆದರಿಕೆಯನ್ನು ನಿರ್ದೇಶಕ ಒಡ್ಡಿದ್ದ ಬಗ್ಗೆ ಶರ್ಲಿನ್ ತಿಳಿಸಿದ್ದಾಳೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಆ ನಿರ್ದೇಶಕ ರೂಪೇಶ್ ನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಕೇಸಿಗೆ ಸಂಬಂಧಪಟ್ಟ ವಿಚಾರಣೆ ಮಾಡಲು ಶರ್ಲಿನ್ ಳನ್ನು ಅನೇಕ ಬಾರಿ ಪೊಲೀಸ್ ಸ್ಟೇಶನ್ ಗೆ ಕರೆದರೂ ಆಕೆ ಬರಲೇ ಇಲ್ಲ ಎನ್ನುವುದು ಸಹ ಸದ್ಯದ ಮಾಹಿತಿ. ನನಗೆ ಟೈಮ್ ಇಲ್ಲ ಅದಕ್ಕೆ ಸ್ಟೇಶನ್ ಗೆ ಹೋಗೋಕೆ ಆಗಲಿಲ್ಲ ಅಂತ ಹೇಳಿದ್ದಾಳೆ ಶರ್ಲಿನ್ .

Share this Story:

Follow Webdunia kannada