Publish Date: Wed, 03 Oct 2007 (18:21 IST)Updated Date: Wed, 03 Oct 2007 (18:20 IST)
IFM
ನೀಲ್ ಎನ್ ನಿಕ್ಕಿ ಚಿತ್ರದ ವೈಫಲ್ಯದ ಬಳಿಕ ತಾನಿಷಾ ಬಾಲಿವುಡ್ ಸಿನೆಮಾ ಜಗತ್ತಿನಿಂದ ಕಾಣೆಯಾಗಿದ್ದಳು. ನಾಲ್ಕು ಫ್ಲಾಪ್ ಚಿತ್ರಗಳು ಮತ್ತು ಒಂದು ಹಿಟ್ ಚಿತ್ರದ ಹಣೆಪಟ್ಟಿ ಅಂಟಿಸಿಕೊಂಡಿರುವ ಆಕೆ 2 ವರ್ಷಗಳ ಬಳಿಕ ತಾನಿಷಾ ಪುನಃ ಕಾಣಿಸಿಕೊಂಡಿದ್ದಾಳೆ.
ಏನೇ ಆಗಲೀ ಪುನಃ ಹೋರಾಟ ನೀಡುವ ಸಂಕಲ್ಪ ತೊಟ್ಟಿರುವ ಈ ವರ್ಷಾಂತ್ಯದಲ್ಲಿ ನಿಮ್ಮೆದುರು ಬರಲಿದ್ದಾಳೆ. ಪರೇಶ್ ರಾವಲ್, ಸುನಿಲ್ ಶೆಟ್ಟಿ, ಉಪೇನ್ ಪಟೇಲ್, ತುಶಾರ್ ಕಪೂರ್ ಮತ್ತು ಈಶಾ ಡಿಯೋಲ್ ಜತೆ "ಒನ್ ಟು ತ್ರೀ"ಚಿತ್ರದಲ್ಲಿ ಮತ್ತು ಬಚ್ಚನ್ ಜತೆ ಸರ್ಕಾರ್ ರಾಜ್‌ನಲ್ಲಿ ಅಭಿನಯಿಸಿದ್ದಾಳೆ.
ಒನ್ ಟು ತ್ರೀನ ನಿಮ್ಮ ಪಾತ್ರದ ಬಗ್ಗೆ ತಿಳಿಸಿ ಎಂದು ತಾನಿಷಾಳನ್ನು ಕೇಳಿದಾಗ, ಇದೊಂದು ಕಾಮಿಡಿ ಚಿತ್ರ. ಅದರಲ್ಲಿ ನನ್ನದು ಕಾರ್ ಶೋರೂಂನಲ್ಲಿ ಕೆಲಸ ಮಾಡುವ ಮುಗ್ಧ, ಆಕರ್ಷಕ ಯುವತಿಯ ಪಾತ್ರ. ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರನ್ನು ಖಂಡಿತವಾಗಿ ನಗಿಸುತ್ತದೆ ಎಂದು ಮಾತ್ರ ಹೇಳಬಲ್ಲೆ ಎನ್ನುತ್ತಾಳೆ ತಾನಿಷಾ.
ಹೊಸ ನಿರ್ದೇಶಕರ ಜತೆ ಕೆಲಸ ಮಾಡುವುದು ರಿಸ್ಕಿಯೇ ಎಂಬ ಪ್ರಶ್ನೆಗೆ, ಅಶ್ವಿನಿ ಧೀರ್‌ಗೆ ಕಿರುತೆರೆಗೆ ಬರೆದು ಅನುಭವವಿದೆ. ಈಗ ದೊಡ್ಡ ತೆರೆಗೆ ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ. ಆದ್ದರಿಂದ ಅವರು ಹೊಸಬರೇನೂ ಅಲ್ಲ ಎಂದು ಉದ್ಗರಿಸಿದಳು.
ಸರ್ಕಾರ್ ರಾಜ್‌ನಲ್ಲಿ ಅಭಿಷೇಕ್ ಬಚ್ಚನ್ ಪತ್ನಿಯಾಗಿದ್ದೀರಾ. ಅಭಿ ಜತೆ ಎರಡನೆ ಬಾರಿ ನಟನೆಯಿಂದ ನಿಮಗೆ ಸಿಕ್ಕಿದ ಅನುಭವವೇನು ಎಂಬ ಪ್ರಶ್ನೆಗೆ ಅಭಿ ಮತ್ತು ಅಮಿತಾಬ್ ಸಹ ನಟರ ಬಗ್ಗೆ ಅತ್ಯಂತ ನಿಗಾ ಇಡುತ್ತಾರೆ. ಅವರು ಅತ್ಯಂತ ವೃತ್ತಿಪರ ನಟರಾಗಿದ್ದು, ನಮ್ಮ ಅಭಿನಯದ ತಪ್ಪುಗಳನ್ನು ಸರಿಪಡಿಸಿ ಮಾರ್ಗದರ್ಶನ ಮಾಡುತ್ತಾರೆಂದು ಹೇಳಿದಳು.
ನೀವು ನಿಮ್ಮ ಸೋದರಿ ಕಾಜೋಲ್ ಮಟ್ಟಕ್ಕೆ ಏರದಿದ್ದರಿಂದ ವಿಮರ್ಶಕರು ನಿಮ್ಮನ್ನು ಬದಿಗೆ ತಳ್ಳಿದ್ದಾರೆಯೇ ಎಂದು ಪ್ರಶ್ನಿಸಿದಾಗ, ಕಾಜೋಲ್ ಚಿತ್ರರಂಗದಲ್ಲಿ 15 ವರ್ಷಗಳ ವೃತ್ತಿಜೀವನ ಪೂರೈಸಿದ್ದಾಳೆ. ನಾನು ಈಗಷ್ಟೇ ಬಂದಿದ್ದೇನೆ. ನನಗೂ ಕಾಲಾವಕಾಶ ಕೊಡಿ ಎಂದು ದೈನ್ಯತೆಯಿಂದ ಕೇಳುತ್ತಾಳೆ.