Article Bollywood Gossips %e0%b2%aa%e0%b2%bf%e0%b2%aa%e0%b2%bf%e0%b2%b8%e0%b2%bf%e0%b2%af%e0%b2%bf%e0%b2%82%e0%b2%a6 %e0%b2%9c%e0%b3%82%e0%b2%a8%e0%b2%bf%e0%b2%af%e0%b2%b0%e0%b3%8d %e0%b2%95%e0%b3%8d%e0%b2%b0%e0%b2%bf%e0%b2%b6%e0%b3%8d 107111300007_1.htm

Select Your Language

Notifications

webdunia
webdunia
webdunia
webdunia

ಪಿಪಿಸಿಯಿಂದ ಜೂನಿಯರ್ ಕ್ರಿಶ್

ಪಿಪಿಸಿಯಿಂದ
ಕ್ರಿಶ್ ಸಿನಿಮಾ ಆಧಾರಿತ, ಮಗುವೊಂದು ಸೂಪರ್ ಹೀರೋ ಆಗಿ ನಟಿಸಲಿರುವ ಜೂನಿಯರ್ ಕ್ರಿಶ್ ಚಿತ್ರವನ್ನು ನಿರ್ಮಿಸಲು ಪರ್ಸೆಪ್ಟ್ ಪಿಕ್ಚರ್ ಕಂಪನಿ(ಪಿಪಿಸಿ) ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಪಿಪಿಸಿಯ ಜಂಟಿ ಆಡಳಿತ ನಿರ್ದೇಶಕ ಶೈಲೇಂದ್ರ ಸಿಂಗ್ ಜೂನಿಯರ್ ಕ್ರಿಶ್ ಚಿತ್ರವನ್ನು ನಿರ್ಮಿಸಲು ಅನುಮತಿ ನೀಡುವಂತೆ ನಿರ್ಮಾಪಕ ರಾಕೇಶ್ ರೋಶನ್ ಅವರಿಗೆ ಮನವಿಯನ್ನು ಕಳುಹಿಸಿದ್ದಾರೆ ಅಲ್ಲದೆ ಗೌರವಧನವನ್ನು ನೀಡಲು ಅವರು ಸಿದ್ದರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಾಣಿಜ್ಯ ಮತ್ತು ಕ್ರೀಡೆಯನ್ನು ಒಳಗೊಂಡ ಆನಿಮೇಶನ್ ಚಿತ್ರ ಮತ್ತು ಮಕ್ಕಳ ಚಿತ್ರಗಳನ್ನು ನಿರ್ಮಿಸಲು ಪಿಪಿಸಿ ಸಿದ್ಧತೆಯನ್ನು ನಡೆಸುತ್ತಿದೆ. ಅಲ್ಲದೆ 2-3 ಮಿಲಿಯನ್ ಡಾಲರ್ ಬಂಡವಾಳದೊಂದಿಗೆ ಆನಿಮೇಶನ್ ನಿಶ್ರಿತ ಮತ್ತು ನಿಜಜೀವನ ಪಾತ್ರಗಳನ್ನೊಳಗೊಂಡ ಮೂರು ಅಥವಾ ನಾಲ್ಕು ಚಿತ್ರಗಳನ್ನು ನಿರ್ಮಿಸಲು ತಯಾರಾಗಿದ್ದು, 2009ರಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯನ್ನು ಹೊಂದಿದೆ.

ಪ್ರಸಕ್ತ ಹನುಮಾನ್ ರಿಟರ್ನ್ಸ್ ಪಿಪಿಸಿಯ ಮೊದಲ ಆದ್ಯತೆಯಾಗಿದ್ದು, ಇದು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.ಒಂದು ಕಾಲದಲ್ಲಿ ಪುರಾಣದ ಪಾತ್ರವನ್ನು ಹೊಂದಿದ್ದು, ಈಗ ಸೂಪರ್‌ಹೀರೋ ಇಮೇಜಿನೊಂದಿಗೆ ಹನುಮಾನ್ ನವೀನ ಚಿತ್ರವಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಅಲ್ಲದೆ 10 ಮಿಲಿಯನ್ ಡಾಲರ್ ವೆಚ್ಚದಲ್ಲಿ ರಿಟರ್ನ್ ಆಫ್ ರಾವಣ ಚಿತ್ರವು ತಯಾರಾಗಲಿದ್ದು, 2009ರಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

Share this Story:

Follow Webdunia kannada