Article Bollywood Gossips %e0%b2%aa%e0%b2%bf%e0%b2%82%e0%b2%95%e0%b2%bf%e0%b2%97%e0%b3%86 %e0%b2%85%e0%b2%b5%e0%b2%b3%e0%b2%bf%e0%b2%ab%e0%b3%8d%e0%b2%b2%e0%b2%be%e0%b2%9f%e0%b3%8d %e0%b2%af%e0%b2%be%e0%b2%95%e0%b3%86 107080100012_1.htm

Daily Horoscope

Select Your Language

Notifications

webdunia
webdunia
webdunia
webdunia

ಪಿಂಕಿಗೆ ಅವಳಿಫ್ಲಾಟ್ ಯಾಕೆ?

ಪ್ರಿಯಾಂಕಾಗೆ
ಪ್ರಿಯಾಂಕಾ ಚೋಪ್ರಾ ಈಗ ಅವಳಿ ಫ್ಲಾಟ್ ಹೊಂದಿದ್ದಾಳೆ. ಒಂದಕ್ಕೊಂದು ಸಂಪರ್ಕವಿರುವ ಫ್ಲಾಟ್‌ಗಳಲ್ಲಿ ಒಂದರಲ್ಲಿ ಆಕೆಯ ಹೆತ್ತವರು, ಇನ್ನೊಂದರಲ್ಲಿ ಆಕೆಯ ಒಂಟಿ ಜೀವನ... ಹೀಗೇಕೆ?

ಇಂತಹ ಪ್ರಶ್ನೆಗೆ ನಮ್ಮ ಪಿಂಕಿ... ಹಾಂ, ಪ್ರಿಯಾಂಕಾ ಚೋಪ್ರಾ ಉತ್ತರ ನೀಡುವುದು ಹೀಗೆ: ನನಗೆ ಹೆತ್ತವರ ಪ್ರೀತಿಯೂ ಬೇಕು, ಇದೇ ವೇಳೆ ನನ್ನ ಬದುಕಿನ ಖಾಸಗಿತನವೂ ಬೇಕು. ಇದಕ್ಕಾಗಿ ಅವಳಿ ಫ್ಲಾಟ್ ಹೊಂದಿದ್ದೇನೆ.

ಆಕೆ ತನ್ನ ಹೊಸ ಮನೆ ನಿರ್ಮಾಣಕ್ಕಾಗಿ ಎಷ್ಟೊಂದು ಆಸಕ್ತಿ ವಹಿಸಿದ್ದರೆಂದರೆ , ಹೊಸ ಚಿತ್ರಗಳನ್ನು ನಿರಾಕರಿಸಿದ್ದರು. ಇದೀಗ ಮನೆ ಅಂತಿಮ ಹಂತದಲ್ಲಿದೆ. ದೀಪಾವಳಿ ವೇಳೆಗೆ ಸಿದ್ಧವಾಗಲಿದೆ. ಆದರೆ ಎರಡು ವಿಭಾಗ ಅಷ್ಟೇ.

ಈ ಅವಳಿ ಫ್ಲಾಟ್ಗಳಿರುವ ಮನೆಯಲ್ಲಿ ಒಂದರಲ್ಲಿ ಆಕೆಯ ಒಂಟಿ ಬದುಕು, ಇನ್ನೊಂದರಲ್ಲಿ ತಾಯ್ತಂದೆ, ಬಂದುಗಳ ಬದುಕು ಸಾಗುತ್ತದಂತೆ. ನನಗೆ ತಾಯ್ತಂದೆಯರೂ ಬೇಕು, ಏಕಾಂತತೆಯೂ ಬೇಕು, ಇದಕ್ಕಾಗಿ ಈ ವಿನ್ಯಾಸದ ಅವಳಿ ಫ್ಲಾಟ್‌ಗಳ ಮನೆ ಹೊಂದಿದ್ದೇನೆ ಎಂದವರು ಹೇಳುತ್ತಾರೆ.

Share this Story:

Follow Webdunia kannada