ಪಿಂಕಿ ಮದುವೆ ಆಗದೆ ಇರಲು ಕಾರಣಗಳು...
Publish Date: Mon, 04 Nov 2013 (16:48 IST)
Updated Date: Mon, 04 Nov 2013 (16:47 IST)
ನನಗೆ ಇಷ್ಟ ಆಗುವ ಹುಡುಗ ಇನ್ನು ಸಿಕ್ಕಿಲ್ಲ ಎಂದು ನೇರವಾಗಿ ಮಾಧ್ಯಮಿಗಳ ಮುಂದೆ ಹೇಳಿದ್ದಾಳೆ ಪ್ರಿಯಾಂಕ ಚೋಪ್ರ. ಹಾಗೆಂದು ಮದುವೆ ಆಗದ ಹುಡುಗರು ಸಂತೋಷ ಪಡುವ ಹಾಗಿಲ್ಲ ಯಾಕೆಂದ್ರೆ ಸದ್ಯಕ್ಕೆ ಆಕೆ ಯಾರ ಕಡೇನೂ ಕಣ್ಣೆತ್ತಿ ನೋಡಲ್ಲ ಅಂತ ಶಪಥ ಮಾಡಿದ್ದಾಳೆ. ಅದಕ್ಕೆ ಕಾರಣಗಳು ಏನಿರಬಹುದು ಎಂಬ ಥಿಂಕಿಂಗ್ ನಿಮ್ಮಲ್ಲಿ ಇದೆ ಅನ್ನೋದನ್ನ ನಾವು ಬಲ್ಲೆವು. ಆ ಬಗ್ಗೆ ತಿಳಿಸ್ತೀವಿ ವಸಿ ಇತ್ತ ನೋಡಿ.. ! ಆಕೆ ಇನ್ನು ಲೈಫ್ ನಲ್ಲಿ ಸೆಟಲ್ ಆಗಿಲ್ಲವಂತೆ. ಆಕೆ ಬಯಸುವವ ಇನ್ನು ಕಣ್ಣಿಗೆ ಕಂಡಿಲ್ಲವಂತೆ! ನನ್ನ ಸೋದರ ಸಿದ್ಧಾರ್ಥ್ ಕಳೆದ ಮೂರುವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ಕನಿಕ ಮಾಥುರ್ ಜೊತೆ ಮದುವೆ ಆಗುತ್ತಿದ್ದಾನೆ. ನನ್ನ ಬ್ರದರ್ ಮದುವೆ ಬಗ್ಗೆ ಮೀಡಿಯಾಗಳಲ್ಲಿ ಪ್ರಸಾರ ಆದ ತಕ್ಷಣ ಎಲ್ಲರು ನನ್ನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವುದಲ್ಲದೇ, ನನ್ನ ಮದುವೆ ನಿಶ್ಚಯ ಆಗಿದೆ ಅನ್ನೋ ರೀತಿಯಲ್ಲಿ ಬರೆಯುತ್ತಿದ್ದಾರೆ ಮಾತಾಡುತ್ತಿದ್ದರೆ ಎಂದು ಬೇಸರ ಪಟ್ಟು ಕೊಂಡಿದ್ದಾಳೆ ಆಕೆ. ಛೆ ಏನಿದು ಕತೆ ಅಂತ ನೀವು ನಾವು ಎಲ್ಲರು ಬೇಜಾರಾಗ ಬೇಕು ಬಿಡಿ. ಸದಾ ಬಾಯ್ ಫ್ರೆಂಡ್ ಗಳ ಜೊತೆಯಲ್ಲಿ ಓಡಾಡದೆ ಇದ್ದರು ಬಾಯ್ ಫ್ರೆಂಡ್ ಗಳಿಗೆ ಕೈ.. ಅದು ಇದು ಕೊಟ್ಟು ಆರಾಮವಾಗಿ ಇರೋ ಚೆಲುವೆ. ಮದುವೆ ಅನ್ನೋ ಬಂಧನಕ್ಕೆ ಸದ್ಯಕ್ಕೆ ಬೀಳೋದು ಒಂದೇ ಕಣ್ಣಿಗೆ ಕಾಣೋ ಗುಂಡಿಗೆ ಗೊತ್ತಿದ್ದೂ ಗೊತ್ತಿದ್ದೂ ಬಿಳೋದು ಒಂದೇ. ಪ್ರಿಯಾಂಕ ಚೋಪ್ರ ನಟಿಸಿದ ಕ್ರಿಶ್-3 ಚಿತ್ರ ಈಗ ಬಿಡುಗಡೆ ಆಗಿದೆ. ಸಂಜಲೀಲಾ ಬನ್ಸಾಲಿ ಅವರ ಬಾಕ್ಸರ್ ಮೆರಿಕಾಂ ಜೀವನ ಕಥೆ ' ಗೂಂಡೆ' ಹಾಗೂ ಜೋಯ ಅಕ್ತರ್ ಚಿತ್ರದಲ್ಲೂ ನಟಿಸುತ್ತಿರುವ ಪ್ರಿಯಾಂಕ ಈ ಎಲ್ಲ ಕಾರಣಗಳಿಂದ ಮದುವೆ ಆಗುತ್ತಿಲ್ಲ.. ಈಗಲಾದ್ರು ಗೊತ್ತಾಯ್ತೆ ನಿಮಗೆ?