Publish Date: Sat, 24 Nov 2007 (13:20 IST)
Updated Date: Sat, 24 Nov 2007 (13:20 IST)
ಭಾರತದಲ್ಲಿ ಅಗಾಧ ಯಶಸ್ಸನ್ನು ಕಂಡ ಜಾನ್ ಅಬ್ರಹಾಂ, ಬಿಪಾಶಾ ಬಸು ಮತ್ತು ಆರ್ಶದ್ ವಾಸಿ ಅಭಿನಯದ ಗೋಲ್ ಚಿತ್ರವು ವಿಭಿನ್ನ ರೀತಿಯಲ್ಲಿ ಗೋಲ್ ಪಡೆದುಕೊಂಡಿದೆ. ಈವರೆಗೆ ಬಾಲಿವುಡ್‌ನ ಅನೇಕ ನಿರ್ಮಾಪಕರು ನೆರೆ ದೇಶ ಪಾಕಿಸ್ತಾನದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ವಿಫಲರಾಗಿದ್ದು, ಗೋಲ್ ಚಿತ್ರದ ನಿರ್ಮಾಣಕರಾದ ಯುಟಿವಿ ಪಾಕಿಸ್ತಾನದಲ್ಲಿ ತನ್ನ ಚಿತ್ರ ಬಿಡುಗಡೆಗೊಳಿಸುವಲ್ಲಿ ಸಫಲತೆಯನ್ನು ಪಡೆದಿದೆ.
ಲಾಹೋರ್, ಕರಾಚಿ ಮುಂತಾದ ನಗರಗಳನ್ನೊಳಗೊಂಡಂತೆ ಪಾಕಿಸ್ತಾನದ ಏಳು ನಗರಗಳಲ್ಲಿ ಬಿಡುಗಡೆಯಾಗಿದ್ದು, ವಿವೇಕ್ ಅಗ್ನಿಹೋತ್ರಿ ನಿರ್ದೇಶನವಿದ್ದು, ಜಾನ್‌ಅಬ್ರಾಹಂ, ಬಿಪಾಶಾ ಬಸು, ಆರ್ಶದ್ ವಾರ್ಸಿ ಮತ್ತು ಬೋಮನ್ ಇರಾನಿ ಅವರು ನಟಿಸಿರುವ ಗೋಲ್ ಚಿತ್ರ ಬಿಡುಗಡೆಗೊಂಡಿದೆ.
ಪಾಕಿಸ್ತಾನದಲ್ಲಿ ಚಿತ್ರ ಬಿಡುಗಡೆಗೊಳಿಸುವ ಬಗ್ಗೆ ಪಾಕಿಸ್ತಾನ ಸೆನ್ಸರ್ ಮಂಡಳಿಯು ಪರವಾನಗಿ ನೀಡಿದ ನಂತರ ಚಿತ್ರವನ್ನು ಬಿಡುಗಡೆಗೊಳಿಸಲಾಯಿತು ಎಂದು ಯುಟಿವಿ ಮೂಲಗಳು ತಿಳಿಸಿವೆ. ಪಾಕಿಸ್ತಾನದಲ್ಲಿ 12 ಪ್ರಿಂಟ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಕರಾಚಿ, ಲಾಹೋರ್, ಹೈದ್ರಾಬಾದ್ ರಾವಲ್ಪಿಂಡಿ, ಮುಲ್ತಾನ್, ಫೈಸಲಾಬಾದ್, ಗುರ್ಜನ್‌ವಾಲಾ ನಗರಗಳಲ್ಲಿ ಬಿಡುಗಡೆಯಾಗಿದೆ
ಇಮ್ರಾನ್ ಹಶ್ಮಿ ಅಭಿನಯದ ಅವಾರಪನ್ ಸಿನಿಮಾವು ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರದ ಮುಖ್ಯವಾಹಿನಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.