Publish Date: Mon, 03 Sep 2007 (17:13 IST)
Updated Date: Mon, 03 Sep 2007 (17:11 IST)
ಬಾಲಿವುಡ್ ತಾರೆ ತನುಶ್ರೀ ದತ್ತಾಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ನಾನಾ ತರದ ತಿನಿಸುಗಳನ್ನು ಮಾಡುವ ಪ್ರಯೋಗದಲ್ಲೇ ಆಕೆ ಮುಳುಗುತ್ತಾಳೆ. ಅದೂ ಬಟರ್ ಚಿಕನ್ ಮಾಡುವುದೆಂದರೆ ತುಂಬ ಖುಷಿ.
ಹೀಗೆಂದು ಆಕೆಯೇ ಹೇಳಿಕೊಂಡಿದ್ದಾಳೆ. ಆದರೆ ಸಿಕ್ಕಿದ್ದೆಲ್ಲ ತಿಂದು ಮೈಬೊಜ್ಜು ಬರಬಾರದಲ್ಲ, ಅದಕ್ಕಾಗಿ ತನ್ನ ಕ್ಯಾಲರಿ ಬಗ್ಗೆ ಎಚ್ಚರಿಕೆಯೂ ಇದೆ. ಸಿಕ್ಕಾಪಟ್ಟೆ ತಿರುಗಾಡುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿಯಂತೆ. ಸ್ವಲ್ಪ ಬಿಡುವು ಸಿಕ್ಕಿದರೆ ಸಾಕು ಪ್ಯಾಕಪ್ ಮಾಡಿ ಹೊರಟೇ ಬಿಡುವುದಾಗಿ ಮಾಜಿ ಸೌಂದರ್ಯ ರಾಣಿ ಹೇಳಿಕೊಂಡಿದ್ದಾಳೆ.
ತನುಶ್ರೀ ದತ್ತಾ ಪಾದರಕ್ಷೆಗಳ ವಿಚಾರದಲ್ಲಿ ಮಾತ್ರ ಕುಖ್ಯಾತ ಲೇಡಿ ಇಮೆಲ್ಡಾ ಮಾರ್ಕೋಸ್‌ಳಂತೆ ಅನುಕರಣೆ. ಎಷ್ಟೊಂದು ಮಮಕಾರವಿದೆಯೆಂದರೆ ಅವಳ ಶೂಸಂಗ್ರಹಾಲಯದ ಶೂಗಳ ಸಂಖ್ಯೆ ಅವಳಿಗೇ ಗೊತ್ತಿಲ್ಲ.
ಪಾದರಕ್ಷೆಗಳ ಅಂಗಡಿ ಕಣ್ಣಿಗೆ ಬಿದ್ದರೆ ಸಾಕು ಅಲ್ಲಿಗೆ ದಾಂಗುಡಿ ಇಡುತ್ತಾಳಂತೆ. ಸೌಂದರ್ಯವರ್ಧಕಗಳು ಕೂಡ ವಿವಿಧ ಬ್ರಾಂಡ್‌ಗಳನ್ನು ಖರೀದಿಸುವುದು ಆಕೆಗೆ ಚಟವಂತೆ.