ಪವನ್ ಕಲ್ಯಾಣ್ v/s ಮಹೇಶ್ ಬಾಬು
Publish Date: Wed, 23 Oct 2013 (17:37 IST)
Updated Date: Wed, 23 Oct 2013 (17:37 IST)
ಈಗ ಟಾಲಿವುಡ್ ನಲ್ಲಿ ಮಹೇಶ್ ಬಾಬು ಮತ್ತು ಪವನ್ ಕಲ್ಯಾಣ್ ಅವರದ್ದೇ ಸುದ್ದಿ. ಇತ್ತೀಚೆಗಷ್ಟೇ ಬಿಡುಗಡೆಯಾದ ಮಹೇಶ್ ದೂಸುಕೆಳ್ತಾ ಮತ್ತು ಪವನ್ ಅತ್ತಿಂಟಿಕಿ ದಾರೇದಿ ಚಿತ್ತಗಳು ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುತ್ತಿದೆ. ಟಾಲಿವುಡ್ ನ ಈ ಟ್ರೆಂಡ್ ಸೆಟ್ಟರ್ ಗಳು ಕಾಲ್ ಶೀಟ್ ಕೊಟ್ಟರೆ ತಮ್ಮ ಜೀವನ ಸಾರ್ಥಕ ಎಂದು ಪ್ರೊಡ್ಯೂಸರ್, ಡೈರೆಕ್ಟರ್ ಗಳು ಒದ್ದಾಡುವಂತಹ ಗೆಲುವನ್ನು ಈ ನಾಯಕರುಗಳು ನೀಡಿದ್ದಾರೆ. ಕೇವಲ ತಮ್ಮನ್ನು ನಂಬಿದ ನಿರ್ದೇಶಕ-ನಿರ್ಮಾಪಕರಿಗೆ ಮಾತ್ರವಲ್ಲ ಇಲಿಯಾನ, ಕಾಜಲ್, ಸಮಂತರಂತಹ ಹೀರೋಯಿನ್ ಗಳ ಗ್ರಾಫ್ ಬದಲಾಯಿಸಿದ ಕೀರ್ತಿ ಮಹೇಶ್ ಗೆ ಸಲ್ಲುತ್ತದೆ. ಅದೇರೀತಿ ಆವರೆಗೂ ಐರನ್ ಲೆಗ್ ಎಂದು ಹೆಸರು ಗಳಿಸಿದ್ದ ಶೃತಿಹಾಸನ್ ಅವರ ತಾರ ಬದುಕು ಬದಲಾಯಿಸಿ ಗೋಲ್ಡನ್ ಲೆಗ್ ಆಗಿ ಮಾರ್ಪಡಿಸಿದ್ದು , ಪ್ರಣಿತಾಗೆ ಉತ್ತಮ ಕೆರಿಯರ್ ಗ್ರಾಫ್ ನೀಡಿದ್ದು ಪವನ್ ಕಲ್ಯಾಣ್. ಟಾಲಿವುಡ್ , ಬಾಲಿವುಡ್ ಗಳಲ್ಲಿ ತನ್ನ ಪ್ರತಿಭೆ ತೋರುತ್ತಾ ಯಶಸ್ಸಿನ ದಾರಿ ಸುಗಮ ಮಾಡಿಕೊಂಡ ಪ್ರತಿಭಾವಂತ. ಟಾಲಿವುಡ್ ನಲ್ಲಿ ನಟಿಸುತ್ತಿರುವ ಹೀರೋಯಿನ್ಸ್ ಒಮ್ಮೆ ಪವನ್ ಜೊತೆ ನಟಿಸಿದರೆ ಸಾಕು ತಮ್ಮ ಬದುಕು ಸಾರ್ಥಕ ಎಂದು ಹೇಳುವಂತೆ ಬೆಳೆದಿರುವ ನಾಯಕ.ಹೀರೋಯಿನ್ಸ್ ವಿಷಯದಲ್ಲಿ ಮಹೇಶ್ ಯಾವ ರೀತಿ ಗೆಲುವಿನ ಸರದಾರ ಆಗಿದ್ದಾರೋ ಅದೇ ರೀತಿ ಪವನ್ ಸಹ ಇದ್ದಾರೆ ಎನ್ನುತ್ತಿದೆ ಟಾಲಿವುಡ್. ಪ್ರಸ್ತುತ ತೆಲುಗು ದೇಶಂಗೆ ಸೇರ್ಪಡೆ ಆಗಿ ರಾಜಕೀಯ ಬದುಕಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದಾರೆ ಪವನ್. ಈಗ ತೆರ ಏರುತ್ತಿರುವ ಮಹೇಶ್ ‘ 1’ ಚಿತ್ರ ಯಾವರೀತಿ ಅಸಿನ್ ಮತ್ತು ಕೀರ್ತಿ ಸನನ್ ಗೆ ಬ್ರೇಕ್ ನೀಡುತ್ತದೆಯೋ ಕಾದು ನೋಡ ಬೇಕು