ಪರಿಣಿತಿ-ಇಲಿಯಾನಾ ಪೈಕಿ ಯಾರು ಓಕೆ?
Publish Date: Sat, 13 Jul 2013 (17:53 IST)
Updated Date: Sat, 13 Jul 2013 (17:53 IST)
ಸೂರಜ್ ಬರ್ಜಾತ್ಯಾ ಸಿನೆಮಾ ಮಾಡುತ್ತಿದ್ದಾರೆ. ಅವರಿಗೆ ಸಲ್ಮಾನ್ ಖಾನ್ ಅಂದರೆ ಅದೇನೋ ಪ್ರೀತಿ. ತಮ್ಮ ಹೊಸ ಚಿತ್ರಕ್ಕೂ ಸಲ್ಲೂ ಮಿಯಾನನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಕತ್ರಿನಾ ಮತ್ತು ಅನುಷ್ಕಾ ಶರ್ಮಾ ಪೈಕಿ ಯಾರಾದರೊಬ್ಬರು ನಾಯಕಿ ಆಗುತ್ತಾರೆ ಎಂಬ ಸುದ್ದಿ ಹರಡಿದ್ದು ಸುಳ್ಳಾಗಿದೆ. ಫ್ಯಾಮಿಲಿ ಡ್ರಾಮಾಗಳನ್ನೇ ಆಯ್ದುಕೊಳ್ಳುವ ಸೂರಜ್ಗೆ ಪಕ್ಕದ್ಮನೆ ಇಮೇಜಿನ ಹುಡುಗಿಯರೇ ಬೇಕು. ಹೀಗಾಗಿ ಚಿತ್ರಕ್ಕೆ ಪರಿಣಿತಿ ಚೋಪ್ರಾ ಇಲ್ಲವೇ ಇಲಿಯಾನಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಸದ್ಯ ಅವರಿಬ್ಬರೂ ವಿದೇಶದಲ್ಲಿ ಬೇರೊಂದು ಚಿತ್ರದಲ್ಲಿ ಬ್ಯುಸಿ ಆಗಿರುವುದರಿಂದ ಅವರಿಬ್ಬರೂ ಅಲ್ಲಿಂದ ಬಂದ ಬಳಿಕ ಇಬ್ಬರಿಗೂ ಸ್ಕ್ರಿಪ್ಟ್ ಓದಿಸಿ ಯಾರು ನಾಯಕಿ ಎಂಬುದು ನಿರ್ಧಾರವಾಗಲಿದೆ.ಬೋನಿ ಕಪೂರ್ ಮತ್ತು ಪ್ರಭುದೇವ್ ಸಲ್ಮಾನ್ ಡೇಟ್ಗಾಗಿ ಕಾಯುತ್ತಿರುವ ಮಧ್ಯೆಯೇ ಸೂರಜ್ ಸಲ್ಮಾನ್ ಅವರ ಕಾಲ್ಶೀಟ್ ಪಡೆದು ಅಚ್ಚರಿ ಮೂಡಿಸಿದ್ದಾರೆ. ಸಲ್ಮಾನ್ ಕತೆ ಕೇಳಿದ್ದೇ ತಡ, ತಾನು ಚಿತ್ರದಲ್ಲಿ ನಟಿಸಲು ತಯಾರು ಎಂದಿದ್ದಾರಂತೆ. ಮೆಂಟಲ್ ಮತ್ತು ಕಿಕ್ ಚಿತ್ರೀಕರಣ ಮುಗಿಯುತ್ತಿದ್ದಂತೆ ಅಂದರೆ ಆಗಸ್ಟಲ್ಲಿ ಈ ಚಿತ್ರ ಸೆಟ್ಟೇರುವುದು ಬಹುತೇಕ ಖಚಿತವಾಗಿದೆ.