ಪತ್ರಕರ್ತರ ಮೇಲೆ ಉರಿದು ಬಿದ್ದ ದೀಪಿಕಾ ಪಡುಕೋಣೆ..!
, ಶನಿವಾರ, 8 ಫೆಬ್ರವರಿ 2014 (09:54 IST)
ಸಿನಿಮಾಗಳ ಯಶಸ್ಸಿಗೆ ಹೀರೋ ಹೀರೋಯಿನ್ ಗಳ ಪಾತ್ರ ಹೆಚ್ಚಾಗಿರುತ್ತದೆ. ಕೆಲವರು ತಾವು ಪಡೆಯು ಮೊತ್ತ ಹೆಚ್ಚಿಸುತ್ತಾರೆ . ಇನ್ನು ಕೆಲವರು ಆ ಚಿತ್ರದ ಲಾಭದ ಗಳಿಕೆಯನ್ನು ಕೇಳುತ್ತಾರೆ. ಈ ಮಟ್ಟದ ಡಿಮ್ಯಾಂಡ್ ಯಾವ ಹೀರೋಯಿನ್ ಗು ಸಹ ಬಂದಿಲ್ಲ. ಆದರೆ ದೀಪಿಕಾ ಪಡುಕೊಣೆಗೆ ಇಂತಹ ಅವಕಾಶ ದೊರೆತಿದೆ . ಆಕೆ ನಟಿಸಿದ ಎಲ್ಲ ಚಿತ್ರಗಳು ಕಳೆದ ವರ್ಷ ಅಪರೂಪದ ಯಶಸ್ಸು ಪಡೆದು, ಈಗ ಆಕೆ ಬಾಲಿವುಡ್ ಮೋಸ್ಟ್ ವಾಂಟೆಡ್ ನಟಿ ಆಗಿದ್ದಾಳೆ. ದೀಪಿಕಾ ಹೊಸ ಇಂಗ್ಲೀಶ್ ಚಿತ್ರ ಫೈಂಡಿಂಗ್ ಫರ್ನಾಂಡೀಸ್ . ಇದಕ್ಕೆಂದು ಆಕೆ ತಾನು ಮೊದಲು ಪಡೆದ ಮೊತ್ತವಲ್ಲದೆ ಯಶಸ್ಸಾದ ಬಳಿಕ ಸಿಗುವ ಮೊತ್ತದಲ್ಲಿ ಲಾಭವನ್ನು ಸಹ ಕೇಳುತ್ತಿದ್ದಾಳೆ. ದೀಪಿಕಾ ನಟಿಸುತ್ತಿರುವ ಮೊದಲ ಭಾರತೀಯ ಆಂಗ್ಲ ಚಿತ್ರ ಇದಾಗಿದೆ. ಈ ಸಿನೆಮಾವನ್ನು ದಿನೇಶ್ ವಿಜನ್ ಜೊತೆ ಸೇರಿ ಸೈಫ್ ಅಲಿಖಾನ್ ತಯಾರಿಸುತ್ತಿದ್ದಾರೆ.ಇದರಲ್ಲಿ ಇಶ್ಕ್ ಜಾದೆ ಚಿತ್ರದ ಅರ್ಜುನ್ ಕಪೂರ್ , ನಾಸುರುದ್ದೀನ್ ಷಾ, ಪಂಕಜ್ ಕಪೂರ್, ಡಿಂಪಲ್ ಕಪಾಡಿಯಾ , ದೀಪಿಕ ಪಡುಕೋಣೆ ಮುಖ್ಯ ಪಾತ್ರದಲ್ಲಿ ಇದ್ದಾರೆ. ಜುಲೈ ನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದಿಂದ ಬರುವ ಲಾಭದಲ್ಲಿ ಸ್ವಲ್ಪ ಮೊತ್ತ ತನಗೆ ನೀಡ ಬೇಕು ಎನ್ನುವ ಡಿಮ್ಯಾಂಡ್ ಮಾಡಿದ್ದಾಳೆ ಈಕೆಯಂತೆ! ಇದರ ಬಗ್ಗೆ ಒಬ್ಬ ಪತ್ರಕರ್ತರು ಪ್ರಶ್ನಿಸಿದಾಗ ದೀಪಿಕಾ ನಿಮ್ಮ ಸಂಬಳ ಎಷ್ಟು ಎಂದು ನಾನು ಎಂದಾದರು ಕೇಳಿದ್ದೀನಾ, ನೀವ್ಯಾಕೆ ನನ್ನ ಸಂಪಾದನೆಯ ವಿಷಯಕ್ಕೆ ತಲೆ ತೋರಿಸುತ್ತೀರಿ ಎಂದು ಉರಿದು ಬಿದ್ದಳಂತೆ.. ಇಲ್ಲ ಎನ್ನುವ ಉತ್ತರ ನೀಡಿದ್ದಾರೆ, ಅಥವಾ ಮೌನವಾಗಿ ಇದ್ದಿದ್ದರೆ ಏನು ಗಂಟು ಕರಗುತ್ತಿತ್ತು.. ಇದ್ಯಾಕೆ ಈಕೆ ಈ ಪರಿ ಕೋಪ ಮಾಡಿಕೊಂಡಿದ್ದು ಎನ್ನುವ ಮಾತು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ!