ಪತ್ನಿಯನ್ನು ಅತಿಯಾಗಿ ಪ್ರೀತಿಸುವವರ ಪಟ್ಟಿಯಲ್ಲಿ ಸೈಫ್ ಆಲಿ ಖಾನ್ ಜಾಗಪಡೆದ ಸುದ್ದಿಯ ಬೆನ್ನಲ್ಲೇ ಕರೀನಾ ಕೂಡಾ ತನ್ನ ಪತಿ ಮೇಲಿನ ಪೊಸೆಸಿವ್ ಅನ್ನು ಹೊರಗೆಡಹಿದ್ದಾಳೆ. ಇಮ್ರಾನ್ ಹಶ್ಮಿ ಜೊತೆಗೆ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಕರೀನಾ ಕಪೂರ್ ಕಿಸ್ಸಿಂಗ್ ಸೀನ್ಗೆ ಒಲ್ಲೆ ಎಂದಿದ್ದು, ನಿರ್ದೇಶಕರೂ ಆಕೆಯನ್ನು ಓಲೈಸುವಲ್ಲಿ ವಿಫಲರಾಗಿದ್ದಾರೆ. ಅದರೊಂದಿಗೆ ಪತಿ ಸೈಫ್ ಕೂಡಾ ಮುಂದಿನ ಚಿತ್ರದಿಂದ ಕಿಸ್ಸಿಂಗ್ ಸೀನ್ಗಳಲ್ಲಿ ನಟಿಸಬಾರದು ಎಂಬ ಲಕ್ಷ್ಮಣ ರೇಖೆ ಎಳೆದಿದ್ದಾರೆ. ಅಂದರೆ ಪರಸ್ಪರ ಮುತ್ತಿಡಲು, ಮುದ್ದಾಡಲೂ ಅವಕಾಶ ಇಲ್ಲವೇ ಎಂದು ಕೇಳಬೇಡಿ. ಸೈಫ್ ಇನ್ನು ಮುಂದೆ ತೆರೆಯ ಮೇಲೆ ಇತರ ನಟಿಯರಿಗೆ ಕಿಸ್ ಕೊಡಬಾರದೆಂಬ ಡಿಮಾಂಡ್ ಮುಂದಿಟ್ಟಿದ್ದಾರೆ ಕರೀನಾ.
ಶುದ್ಧಿ ಚಿತ್ರದಲ್ಲೂ ಹೃತಿಕ್ ರೋಷನ್ ಜೊತೆ ಲಿಪ್ಲಾಕ್ ಮಾಡಲು ಒಲ್ಲೆ ಎಂದಿರುವ ಕರೀನಾ ಇತ್ತೀಚೆಗೆ ಕಥೆ ಕೇಳುತ್ತಿದ್ದಾಗ ಅಲ್ಲೊಂದು ಕಿಸ್ಸಿಂಗ್ ಸೀನ್ ಇರುವುದು ಕರೀನಾಗೂ ಗೊತ್ತಾಯಿತು. ಕೂಡಲೇ ಆ ಸೀನ್ ತುಂಡರಿಸುವಂತೆ ಕರೀನಾ ಡಿಮಾಂಡ್ ಮಾಡಿದ್ದರು. ಅಲ್ಲದೆ ಪತಿಯೂ ಈ ಕಂಡಿಷನ್ ಪಾಲಿಸಬೇಕು ಎಂದಿದ್ದಾರೆ. ಈ ದೃಶ್ಯವನ್ನು ಚಿತ್ರಕಥೆ ಬರೆಯುವವರು ಬೇರೆ ರೀತಿಯಲ್ಲಿ ಕಟ್ಟಿಕೊಡುವ ಯೋಚನೆ ಮಾಡುತ್ತಿದ್ದಾರಂತೆ. ಜೀವನದಲ್ಲಿ ದುಡ್ಡೇ ಎಲ್ಲವೂ ಅಲ್ಲ ಎನ್ನುವ ಕರೀನಾ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದಂತಿದೆ.