Article Bollywood Gossips %e0%b2%aa%e0%b2%9f%e0%b3%8c%e0%b2%a1%e0%b2%bf %e0%b2%b5%e0%b2%82%e0%b2%b6%e0%b2%a6 %e0%b2%a8%e0%b2%b5%e0%b2%be%e0%b2%ac%e0%b2%a8%e0%b2%be%e0%b2%97%e0%b2%bf %e0%b2%b8%e0%b3%88%e0%b2%ab%e0%b3%8d %e0%b2%85%e0%b2%b2%e0%b2%bf %e0%b2%96%e0%b2%be%e0%b2%a8%e0%b3%8d 111102400042_1.htm

Daily Horoscope

Select Your Language

Notifications

webdunia
webdunia
webdunia
webdunia

ಪಟೌಡಿ ವಂಶದ ನವಾಬನಾಗಿ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್
IFM
ಪಟೌಡಿ ವಂಶದ 10ನೇ ನವಾಬನಾಗಿ ಸೈಫ್ ಅಲಿ ಖಾನ್ ಅವರಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ಸಂಪ್ರದಾಯದಂತೆ, ತಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಮರಣದ ನಂತರ (ಸೆಪ್ಟೆಂಬರ್ 22), ಅವರು ಈ ಬಿರುದು ಪಡೆಯಲಿದ್ದಾರೆ ಮತ್ತು ಹರಿಯಾಣದಲ್ಲಿರುವ ಪಟೌಡಿ ಸಂಸ್ಥಾನದ ರಾಜನಾಗಲಿದ್ದಾರೆ. ಟೈಗರ್ ಪಟೌಡಿಯವರ ಮರಣದ 40 ದಿನಗಳ ನಂತರ ಅಕ್ಟೋಬರ್ ಅಂತ್ಯದಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸೈಫ್‌ನ ಕಿರೀಟ ಧಾರಣಾ ಸಮಾರಂಭಕ್ಕಾಗಿ ರಾಜ್ಯದ ಜನತೆ ಹೆಚ್ಚಿನ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಭಾರತದಲ್ಲಿ ರಾಜರ ಆಡಳಿತವು ಕೊನೆಗೊಂಡಿದ್ದರೂ, ಪಟೌಡಿ ಕುಟುಂಬಕ್ಕೆ ಈ ಬಗ್ಗೆ ಭಾವನಾತ್ಮಕ ಬಾಂಧವ್ಯವಿದೆ. ಮನ್ಸೂರ್ ಆಲಿ ಖಾನ್ ಇಲ್ಲಿ ಜನಪ್ರಿಯರಾಗಿದ್ದು, ಅದೇ ರೀತಿ ಅವರ ಪತ್ನಿ ಶರ್ಮಿಳಾ ಟಾಗೋರ್ ಮತ್ತು ಮಕ್ಕಳಾದ ಸೈಫ್, ಅವರ ತಂಗಿಯರಾದ ಸಬಾ ಮತ್ತು ಸೋಹಾ ಬಗೆಗೂ ಜನರಿಗೆ ಹೆಚ್ಚಿನ ಪ್ರೀತಿ. ನವಾಬನಾದ ಬಳಿಕ ಸೈಫ್ ಅವರಿಗೆ ಕುಟುಂಬದ ಆಸ್ತಿ, ಪೂರ್ವಜರ ಮನೆ, ಸಂಸ್ಥೆ, ಆಸ್ಪತ್ರೆ ಹಾಗೂ ಇತರ ದತ್ತಿ ಕಾರ್ಯಗಳಿಗೆ ಹೊಣೆಗಾರಿಕೆ ದೊರೆಯುತ್ತದೆ.

'ನವಾಬ' ಎಂಬ ಬಿರುದು ಉಪಯೋಗಿಸುವುದು ಕಾಲಾಭಾಸವಾಗುತ್ತದೆ, ಹೀಗಾಗಿ ತಾನು ಅದನ್ನು ಬಳಸುವುದಿಲ್ಲ ಎಂದು ತಿಳಿಸಿರುವ ಸೈಫ್ ಅಲಿ ಖಾನ್, ತಂದೆಯನ್ನೇ ಪಟೌಡಿ ವಂಶದ ಕೊನೆಯ ನವಾಬನಾಗಿ ಜನ ನೆನೆಪಿನಲ್ಲಿಟ್ಟುಕೊಳ್ಳಬೇಕೆಂಬುದು ತನ್ನ ಬಯಕೆ ಎಂದಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada