Publish Date: Fri, 03 Aug 2007 (13:33 IST)
Updated Date: Fri, 03 Aug 2007 (13:33 IST)
ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರ ನ್ಯೂಯೋರ್ಕ್‌ನಲ್ಲಿ ಆ.19ರಂದು ಜರುಗಲಿರುವ ಭಾರತ(ಸ್ವಾಂತತ್ರ್ಯ) ದಿನಾಚರಣೆಯ ಪಥಸಂಚಲನದಲ್ಲಿ ಮುಖ್ಯಅತಿಥಿಯಾಗಿರುತ್ತಾರೆ.
ಪ್ರಸ್ತುತ ಮುಖ್ಯಅತಿಥಿಗೆ ಗ್ರೇಂಡ್ ಮಾರ್ಷಲ್ ಎಂಬ ಹೆಸರಿದ್ದು, ಈ ವ್ಯಕ್ತಿ ಪಥಸಂಚಲನದ ನಾಯಕತ್ವ ವಹಿಸುತ್ತಾರೆ, ಗೌರವ ವಂದನೆ ಸ್ವೀಕರಿಸುತ್ತಾರೆ. ಈ ಹಿರಿಮೆ ಪ್ರಿಯಾಂಕಾಗೆ ಲಭಿಸಿದೆ.
ಪ್ರಸ್ತುತ ದಿನಾಚರಣೆಯ ಪ್ರಥಮ ಪಥಸಂಚಲನದಲ್ಲಿ ಬಾಲಿವುಡ್ ಅಂದಿನ ಹಿರಿಯ ತಾರೆ ರಾಜ್‌ಕಪೂರ್ ನೇತೃತ್ವ ವಹಿಸಿದ್ದರು. ಈ ಗೌರವ ಇದೀಗ ಪ್ರಿಯಾಂಕಾಗೂ ಲಭಿಸಿದೆ.
ಭಾರತದ ಹೊರಗಡೆ ನಡೆಯುವ ದೇಶದ ಸ್ವಾತಂತ್ರ್ಯದಿನಾಚರಣೆಗಳಲ್ಲಿ ಇದೇ ಭವ್ಯವಾದುದು ಎಂದು ಪರಿಗಣಿಸಲಾಗಿದೆ.