Article Bollywood Gossips %e0%b2%a8%e0%b3%8d%e0%b2%af%e0%b3%82%e0%b2%af%e0%b2%be%e0%b2%b0%e0%b3%8d%e0%b2%95%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%9c%e0%b2%be%e0%b2%a8%e0%b3%8d %e0%b2%85%e0%b2%ac%e0%b3%8d%e0%b2%b0%e0%b2%b9%e0%b2%be%e0%b2%82 108121500029_1.htm

Daily Horoscope

Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್‌ನಲ್ಲಿ ಜಾನ್ ಅಬ್ರಹಾಂ

ಜಾನ್ ಅಬ್ರಹಾಂ
IFM
'ಕಾಬೂಲ್ ಎಕ್ಸ್‌ಪ್ರೆಸ್' ಜೋಡಿ ಜಾನ್ ಅಬ್ರಹಾಂ ಮತ್ತು ಕಬೀರ್ ಖಾನ್ ಈಗ ಮತ್ತೊಮ್ಮೆ ಒಂದಾಗಿ ನ್ಯೂಯಾರ್ಕ್ ನಾಮಕ ಚಿತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಹೊಸ ಹೆಸರು ಸಿಗುವವರೆಗೆ ನ್ಯೂಯಾರ್ಕ್ ಎಂದು ತಾತ್ಕಲಿಕ ನಾಮಕರಣ ಮಾಡಲಾಗಿತ್ತು. ಆದರೆ ಈಗ ಅವರಿಗೆ ಈ ಹೆಸರೇ ಬಹಳ ಮೆಚ್ಚುಗೆಯಾಗಿರುವುದರಿಂದ ಇದನ್ನೇ ಚಿತ್ರದ ಹೆಸರಾಗಿ ಉಳಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಜಾನ್ ಜೊತೆ ಕತ್ರಿನಾ ಕೈಫ್, ನೀಲ್ ಮುಖೇಸ್ ಮತ್ತು ಇರ್ಫಾನ್ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಟ್ರೈಲರ್‌ಗಳು ರಬ್ನೆ ಬನಾ ದಿ ಜೋಡಿ ಚಿತ್ರದೊಂದಿಗೆ ದರ್ಶಕರ ವೀಕ್ಷಣೆಗೆ ಲಭ್ಯವಾಗುತ್ತವೆ.

ನ್ಯೂಯಾರ್ಕ್ ಮೂವರು ಗೆಳೆಯರ ಕಥೆಯನ್ನು ಹೊಂದಿದೆ, ಚಿತ್ರದ ಘಟನಾವಳಿಗಳು ನಡೆವ ತಾಣ ಸುಂದರ ನಗರಿ ನ್ಯೂಯಾರ್ಕ್. ಜೀವನದಲ್ಲಿ ನಡೆವ ಕೆಲವು ಘಟನೆಗಳಿಂದ ನಮ್ಮ ಜೀವನದ ದಿಕ್ಕು ಬದಲಾಗಿ ಬಿಡುತ್ತದೆ. ನ್ಯೂಯಾರ್ಕ್ ಚಿತ್ರದಲ್ಲೂ ಸ್ನೇಹಿತರ ಜೀವನದಲ್ಲಿ ನಡೆವ ಕೆಲವು ಘಟನೆಗಳಿಂದ ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಉಂಟಾಗುತ್ತವೆ ಮತ್ತು ಇದರ ಮೇಲೆ ಅವರ ನಿಯಂತ್ರಣ ಇರುವುದಿಲ್ಲ.

ನ್ಯೂರ್ಯಾಕ್ 2009ರಲ್ಲಿ ತೆರೆಗೆ ಬರಲಿದೆ.

Share this Story:

Follow Webdunia kannada