ನೂರು ಕೋಟಿಗೆ ಒಪ್ಪದ ರಾಜಮೌಳಿ?
Publish Date: Fri, 13 Dec 2013 (11:41 IST)
Updated Date: Fri, 13 Dec 2013 (11:41 IST)
ರಾಜಮೌಳಿ ಮಾಡುವ ಕೆಲಸವು ತುಂಬಾ ಪರ್ಫೆಕ್ಟ್ ಆದ್ದರಿಂದಲೇ ಅವರ ಚಿತ್ರಗಳು ಸಿಕ್ಕಾಪಟ್ಟೆ ಒಳ್ಳೆಯ ಗಳಿಕೆ ಕಾಣುತ್ತಿರುವುದು. ಅವರ ಬಹುನಿರೀಕ್ಷಿತ ಚಿತ್ರ ಬಾಹುಬಲಿ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ೀ ಚಿತ್ರದ ನಾಯಕ ಪ್ರಭಾಸ್. 2015 ಕ್ಕೆ ಬಿಡುಗಡೆಯ ಭಾಗ್ಯ ಕಾಣುತ್ತಿರುವ ಈ ಚಿತ್ರಕ್ಕಾಗಿ ರಾಜಮೌಳಿ ಸಾಕಷ್ಟು ದುಡಿಯುತ್ತಿದ್ದಾರೆ. ಅದಕ್ಕೆ ಪೂರಕವಾದ ಕೆಲಸಗಳನ್ನು ತಮ್ಮ ಸಿನಿಟೀಂ ಕೈಲೂ ಸಹ ಮಾಡಿಸುತ್ತಿದ್ದಾರೆ. ಈಗ ಬಂದಿರುವ ಹೊಸ ಸುದ್ದಿ ಅಂದರೇ ಈ ಚಿತ್ರದ ಬಗ್ಗೆ ಬಾಲಿವುಡ್ ಗೂ ಸಹ ಕಣ್ಣು ಬಿದ್ದಿದೆ.ಬಾಲಿವುಡ್ ನ ನಿರ್ಮಾಣ ಸಂಸ್ಥೆಗಳು ಬಾಹುಬಲಿ ಬಾಕ್ಸ್ ಆಫೀಸಿನಲ್ಲಿ ಅಪಾರವಾದ ದಾಖಲೆಗಳನ್ನು ಸೃಷ್ಟಿಸ ಬಹುದು ಎಂದು ನಿರ್ಧರಿಸಿದ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಚಿತ್ರಕ್ಕೆ 100 ಕೋಟಿಗಳ ಆಫರ್ ನೀಡಿದೆಯಂತೆ.ಈಗ ಸಿಕ್ಕಾ ಪಟ್ಟೆ ಸುದ್ದಿಯಲ್ಲಿರುವ ಮಹೇಶ್ ಬಾಬು ಅವರ 1 ನೆನೊಕ್ಕಡೇನೆ ಚಿತ್ರವನ್ನು ಬಾಲಿವುಡ್ ನ ಈರೋಸ್ ಸಂಸ್ಥೆ 72 ಕೋಟಿಗಳಿಗೆ ಖರೀದು ಮಾಡಿದೆಯಂತೆ. ಆದ್ದರಿಂದ ರಾಜಮೌಳಿ ಬಹುನಿರೀಕ್ಷಿತ ಚಿತ್ರ ಬಾಹುಬಲಿ ಬಗ್ಗೆಯೂ ಸಹ ಅನೇಕ ರೀತಿಯ ನಿರೀಕ್ಷೆಗಳಿದ್ದು, ಅದಕ್ಕಾಗಿ ಬಾಲಿವುಡ್ ನಿರ್ಮಾಣ ಸಂಸ್ಥೆ ಆಫರ್ ನೀಡಿದೆಯಾದರೂ ರಾಜಮೌಳಿ ಯಾವುದೇ ಆಫರ್ ಗಳಿಗೂ ಸದ್ಯಕ್ಕೆ ತಲೆ ಬಾಗಿಲ್ಲವಂತೆ. ಆತನ ಟಾರ್ಗೆಟ್ ಸದ್ಯಕ್ಕೆ 150 ಕೋಟಿ ಆಗಿದೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಓಡಾಡುತ್ತಿದೆ.