Article Bollywood Gossips %e0%b2%a8%e0%b3%80%e0%b2%a4%e0%b3%81%e0%b2%b3 %e0%b2%ae%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a8 %e0%b2%ae%e0%b2%a4%e0%b3%8d%e0%b2%a4%e0%b3%81 %e0%b2%85%e0%b2%ad%e0%b2%af%e0%b3%8d%e2%80%8c%e0%b2%97%e0%b3%86 %e0%b2%b2%e0%b2%95%e0%b3%8d%e0%b2%95%e0%b3%8b%e0%b2%b2%e0%b2%95%e0%b3%8d%e0%b2%95%e0%b3%81 108052400017_1.htm

Daily Horoscope

Select Your Language

Notifications

webdunia
webdunia
webdunia
webdunia

ನೀತುಳ ಮುತ್ತಿನ ಮತ್ತು ಅಭಯ್‌ಗೆ ಲಕ್ಕೋಲಕ್ಕು!

ನೀತು ಚಂದ್ರ
IFMIFM
ದೀಢೀರನೆ ಪ್ರಸಿದ್ಧಿಗೆ ಬರಬೇಕೆಂದರೆ ಏನು ಮಾಡಬೇಕು? ಸಹ ನಟನ ತುಟಿಗೆ ತುಟಿಇಕ್ಕಿ ಮುತ್ತಿಡಬೇಕು, ಇಲ್ಲವಾದರೆ ಕನಿಷ್ಠ ಬಟ್ಟೆಯಲ್ಲಿ ಐಟಂ ಡ್ಯಾನ್ಸ್ ಮಾಡಬೇಕು!

ಸುಮಾರು ಮೂರು ವರ್ಷಗಳ ಕಾಲ ಥಳುಕಿನ ಲೋಕದಲ್ಲಿರುವ ನೀತು ಚಂದ್ರ ಎಂಬ ಸುಂದರಿಯೂ ಈ ದಾರಿಯನ್ನೇ ತುಳಿದಿದ್ದಾಳೆ. ಈಕೆ ಒಯ್ ಲಕ್ಕಿ! ಲಕ್ಕಿ ಒಯ್! (ಒಲ್ಲೋ)ಎಂಬ ಸಿನಿಮಾದಲ್ಲಿ ತನ್ನ ತುಟಿಹಂಚಿಕೊಂಡಿರುವುದು ಅಭಯ್ ಡಿಯೋಲ್ ಜತೆಗೆ. ಈ 'ಅದೃಷ್ಟ'ದ ಸಿನಿಮಾದಲ್ಲಿ ನೀತುಳ ಚುಂಬನ ಅಭಯ್‌ಗೆ ಅದೃಷ್ಟ ತಂದಿಟ್ಟಿದೆ.

ಒಲ್ಲೋ ಸಿನಿಮಾದಲ್ಲಿ ನೀತುಗೆ ಈ 'ಅಧರಮಧುರ' ದೃಶ್ಯಇದೆ ಎಂದು ಅನಾಮಧೇಯವಾಗಿ ಉಳಿಯಲಿಚ್ಛಿಸಿರುವ ಮೂಲ ಒಂದು ಹೇಳಿದೆ. ಸಿನಿಮಾಗೆ ಏನೆಲ್ಲ ಶ್ರೇಷ್ಠವೋ ಅದನ್ನೆಲ್ಲ ಮಾಡಲು ನೀತು ಸಿದ್ಧವಿರುವುದಾಗಿ ಆ ಮೂಲಗಳು ಹೇಳಿವೆ.

ಈ ಸಿನಿಮಾದಲ್ಲಿ ನೀತುವಿಗೆ ಪಂಜಾಬಿ ಹುಡುಗಿಯ ಪಾತ್ರ. ದೆಹಲಿ ಮೂಲದ ಈ ಹುಡುಗಿಯ ಉಡುಪು ಕ್ಯಾಶುವಲ್ ಟಿ-ಶರ್ಟ್ ಮತ್ತು ಜೀನ್ಸ್. ನೀತು ತನ್ನ ಮೊದಲ ಸಿನಿಮಾದ ಏರ್‌ಹೋಸ್ಟೆಸ್ ಪಾತ್ರದಲ್ಲಿ ಗ್ಲಾಮರಸ್ ಉಡುಪಿನಲ್ಲಿ ಕಂಡುಕೊಂಡಿದ್ದರೆ, ಬಳಿಕ ಪೊಲೀಸ್ ಅಧಿಕಾರಿಯಾಗಿ ಖಾಕಿಧಾರಿಣಿಯಾಗಿದ್ದರು. ಇದೀಗ ಟೀ-ಶರ್ಟ್ ಮತ್ತು ಜೀನ್ಸ್.

ಪರೇಶ್ ರಾವಲ್ ಅಭಿನಯಿಸುತ್ತಿರುವ ಒಲ್ಲೋ ಹಬ್ಬಗಳ ಕಾಲವಾದ ಅಕ್ಟೋಬರ್ ವೇಳೆಗೆ ಬಿಡುಗಡೆಯಾಗಲಿದೆ.

Share this Story:

Follow Webdunia kannada