Publish Date: Sat, 30 Jun 2007 (16:09 IST)
Updated Date: Sat, 30 Jun 2007 (16:09 IST)
ಗುರುವಾರದಂದು ಮುಂಬೈಯಲ್ಲಿನ ರಾಯಲ್ ಪಾಂ ಹೋಟೆಲ್‌ನ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದಕ್ಕಾಗಿ ಚಿತ್ರ ನಿರ್ಮಾಪಕ ಮತ್ತು ವಜ್ರ ವ್ಯಪಾರಿ ಭರತ್ ಷಾರನ್ನು ಜುಲೈ 12ರ ವರೆಗೆ ನ್ಯಾಯಾಲಯ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜಾಮೀನಿಗಾಗಿ ಸಲ್ಲಿಸಿದ ಅವರ ಅರ್ಜಿಯನ್ನು ಬೋರಿವಲಿ ಸೆಶನ್ ಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮುಂಚೆ ಷಾ, ದುಬೈ ಆಧಾರಿತ ವ್ಯಕ್ತಿಯಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿ ಮಲ್ಬಾರ್ ಹಿಲ್ ಪೊಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದ್ದರು.
ಕ್ರೈಂ ಬ್ರಾಂಚ್‌ಗೆ ಸೇರಿದ ಹಿರಿಯ ಅಧಿಕಾರಿಯೊಬ್ಬರು ಇದರಲ್ಲಿ ಭೂಗತ ದೊರೆಗಳ ಕೈವಾಡವನ್ನು ಅಲ್ಲಗಳೆದಿದ್ದು, ಈ ಕರೆ ಆಸ್ತಿ ವಿವಾದದ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ.
ಇದು ಭರತ್ ಷಾರ ಮೊದಲ ಕಾನೂನು ಜತೆಗಿನ ತಿಕ್ಕಾಟವಲ್ಲ ಅವರು ಈ ಮುಂಚೆ 2001 ಜನವರಿಯಲ್ಲಿ ತಮ್ಮ ಭೂಗತ ಜಗತ್ತಿನೊಂದಿಗಿನ ಸಂಪರ್ಕದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು.