ನಿರೀಕ್ಷೆಯಲ್ಲಿರುವ " ಧನ್ ಧನಾಧನ್ ಗೋಲ್ "
Publish Date: Thu, 22 Nov 2007 (13:07 IST)
Updated Date: Thu, 22 Nov 2007 (13:06 IST)
ಶಿಮಿತ್ ಅಮೀನ್ ಅವರ ಚಕ್ ದೇ ಇಂಡಿಯಾ ಚಿತ್ರದಿಂದಾಗಿ ನಂತರ ನಿರ್ಲಕ್ಷ್ಯಕ್ಕೊಳಪಟ್ಟಿದ್ದ ಹಾಕಿ ಆಟವು ದೇಶದಾದ್ಯಂತ ಗಮನ ಸೆಳೆಯಲಾರಂಭಿಸಿದ ನಂತರ, ಈಗ ವಿವೇಕ್ ಅಗ್ನಿಹೋತ್ರಿ ಅವರ " ಧನ್ ಧನಾಧನ್ ಗೋಲ್ " ಸಿನಿಮಾವು ದೇಶವು ಫುಟ್‌ಬಾಲ್ ಆಟದ ಮೇಲೆ ಗಮನಹರಿಸುವಂತೆ ಮಾಡುವ ನಿರೀಕ್ಷೆಯನ್ನು ಹೊಂದಿದೆ.ಯುಟಿವಿ ನಿರ್ಮಾಣದ ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶಿಸುತ್ತಿರುವ ಧನ್ ಧನಾ ಧನ್ ಗೋಲ್ ಯುನೈಟೆಡ್ ಕಿಂಗ್ಡಮ್‌ನ ಏಶಿಯನ್ ಪಂಗಡದ ಸಮಕಾಲೀನ ವ್ಯಕ್ತಿಯ ಕಥೆಯಾಗಿದ್ದು, ಚಕ್ ದೇ ಇಂಡಿಯಾವು ಹಾಕಿ ಆಟದ ಜನಪ್ರಿಯತೆಯನ್ನು ಹೆಚ್ಚಿಸಿದಂತೆ, ಈ ಚಿತ್ರವು ಫುಟ್ಬಾಲ್ ನ ಜನಪ್ರಿಯತೆಯನ್ನು ಹೆಚ್ಚಿಸಿ ಭಾರತದಲ್ಲಿ ಫುಟ್ಬಾಲ್ ಆಟಗಾರರ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ. ಚಕ್ ದೇ ಯಶಸ್ಸಿನ ನಂತರ ಧನ್ ಧನಾ ದನ್ ಗೋಲ್ ಸಿನಿಮಾವು ವಿಶ್ವದಾದ್ಯಂತ ಶುಕ್ರವಾರ ಬಿಡುಗಡೆಯಾಗಲಿದ್ದು, ಬಿಪಾಶಾ ಬಸು, ಅರ್ಶದ್ ವಾರ್ಸಿ ಮತ್ತು ಬೋಮನ್ ಇರಾನಿ ಅವರೊಂದಿಗೆ ಬಾಲಿವುಡ್ ಸ್ಟಾರ್ ಜಾನ್ ಅಬ್ರಹಾಂ ಅವರ ನಿರ್ವಹಣೆಯಿಂದಾಗಿ ಈ ಚಿತ್ರವು ದೇಶದ ಚಿತ್ರೋದ್ಯಮದಲ್ಲಿ ಭಾರೀ ಕುತೂಹಲ ಮೂಡಿಸಿದೆ.ಬಿಂದಾಸ್ ಚಿತ್ರ ನವೆಂಬರ್ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗುವ ಮೊದಲೆ ನಿರ್ಮಾಣದ ವೆಚ್ಚವನ್ನು ಗಳಿಸಿಕೊಂಡಿತ್ತು. ಚಿತ್ರದ ಸಂಗೀತದ ಹಕ್ಕುಗಳನ್ನು 11 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿತ್ತು ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.