ನಿಧಾನವಾಗಿ ಚೇತರಿಸಿಕೊಂಡ ಮದ್ರಾಸ್ ಕೆಫೆ
Publish Date: Tue, 27 Aug 2013 (10:59 IST)
Updated Date: Tue, 27 Aug 2013 (10:58 IST)
ಜಾನ್ ಅಬ್ರಹಾಂ ಹಾಗೂ ನರ್ಗಿಸ್ ಫಕ್ರಿ ಅಭಿನಯದ ಮದ್ರಾಸ್ ಕೆಫೆ ಚೆನ್ನೈ ಹೊರತುಪಡಿಸಿ ದೇಶದೆಲ್ಲೆಡೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಆರಂಭದ ದಿನದಲ್ಲಿ ಭರ್ಜರಿ ಓಪನಿಂಗ್ ಸಿಗದಿದ್ದರೂ ಪರವಾಗಿಲ್ಲ ಎನ್ನುವ ಮಟ್ಟಿನ ವ್ಯಾಪಾರ ನಡೆಸಿತ್ತು. ಆದರೆ ಮೊದಲೆರಡು ದಿನಗಳ ಅಂತ್ಯದ ಬಳಿಕ ಚಿತ್ರದ ಆದಾಯ ಹೆಚ್ಚಿದ್ದು ದೇಶಿ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡುಕೊಂಡಿದೆ. ವಿಮರ್ಶಕರಿಂದ ಉತ್ತಮ ಹೊಗಳಿಕೆ ಸಿಕ್ಕಿದ ಹಿನ್ನೆಲೆಯಲ್ಲಿ ಶನಿವಾರದ ಅಂತ್ಯಕ್ಕೆ ಚಿತ್ರಮಂದಿರದತ್ತ ಜನ ದಾಂಗುಡಿ ಇಡಲು ಆರಂಭಿಸಿದ್ದಾರೆ. ರಾಜಕೀಯ ಹಾಗೂ ಯುದ್ಧದ ಕಥೆ ಹೊಂದಿರುವ ಈ ಚಿತ್ರ ನಿಧಾನವಾಗಿ ಪ್ರೇಕ್ಷಕರಿಗೂ ಹಿಡಿಸುತ್ತಿದೆ. ಜಾನ್ ಅಬ್ರಹಾಂ ಅವರ ಈ ಚಿತ್ರ ಮದ್ರಾಸ್ ಕೆಫೆ ಚಿತ್ರೀಕರಣದ ವೆಚ್ಚವನ್ನು ತುಂಬಿಕೊಂಡುವುದಂತೂ ಗ್ಯಾರಂಟಿ. 2011
ರಲ್ಲಿ ಬಿಡುಗಡೆಯಾದ ಜಾನ್ ಅವರ ಫೊರ್ಸ್ ಚಿತ್ರಕ್ಕೆ ಹೋಲಿಸಿದರೆ ಕೆಫೆ ಉತ್ತಮ ಗಳಿಕೆಯತ್ತ ದಾಪುಗಾಲಿಟ್ಟಿದೆ. ಈ ಚಿತ್ರಕ್ಕೆ ಸಿಕ್ಕ ನೆಗೆಟಿವ್ ಪಬ್ಲಿಸಿಟಿ ಚಿತ್ರದ ಇಮೇಜ್ಅನ್ನು ಹಾಳುಮಾಡಿಲ್ಲ. ವಾರಾಂತ್ಯದಲ್ಲಿ ಮನರಂಜನೆಯ ಚಿತ್ರ ನೋಡಲು ಬಯಸುವ ಮಂದಿ ಈ ಚಿತ್ರದ ವೀಕ್ಷಣೆಯಿಂದ ದೂರ ಉಳಿದಿದ್ದಾರೆ ಎಂಬುದು ಪ್ರಾಥಮಿಕ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಶುಕ್ರವಾರದ ಚಿತ್ರದ ದೇಶೀ ಗಳಿಕೆ 5.17ಕೋಟಿ ರೂಪಾಯಿ. ಎರಡು ದಿನಗಳ ಬಳಿಕ ಆ ಮೊತ್ತ 12 ಕೋಟಿಗೆ ಏರಿದೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆಗೆ ಉಂಟಾದ ಅಡ್ಡಿ ಗಲ್ಲಾಪೆಟ್ಟಿಗೆಗೆ ಹೊಡೆತ ನೀಡಿದೆ ಎನ್ನಲಾಗಿದೆ. ಭಾನುವಾರದ ಗಳಿಕೆ 8ರಿಂದ 10 ಕೋಟಿ ದಾಟಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ಬಗ್ಗೆ ಉತ್ತಮ ಮಾತುಗಳು ಕೇಳಿಬರುತ್ತಿವೆ.