Publish Date: Mon, 23 Jul 2007 (11:14 IST)
Updated Date: Mon, 23 Jul 2007 (11:14 IST)
ಬಾಲಿವುಡ್‌ನಲ್ಲಿ ಈಗಾಗಲೇ ಎರಡು 'ದೇವದಾಸ್' ಚಿತ್ರಗಳು ಸೂಪರ್‌ಹಿಟ್ ಆಗಿ ತೆರೆಕಂಡಿವೆ. ಇತ್ತೀಚೆಗಷ್ಟೇ ಅನುರಾಗ್ ಕಶ್ಯಪ್ ಅವರ ಹೊಸ ದೇವದಾಸ್ ಘೋಷಣೆಯಾಗಿತ್ತು, ಈ ಸಾಲಿಗೆ ಹೊಸತೊಂದು ಸೇರ್ಪಡೆ ಸುಧೀರ್ ಮಿಶ್ರ ಅವರಿಂದ ನಡೆಯಲಿದೆ.
ಸುಧೀರ್ ಮಿಶ್ರ ಅವರು ಹೊಸ ಆಶಯದೊಂದಿಗೆ ದೇವದಾಸ್ ಕಥೆಯನ್ನು ಮರು ಚಿತ್ರಣ ಮಾಡಲಿದ್ದಾರಂತೆ. ಮಿಶ್ರ ಅವರ ದೇವದಾಸ್ ಹೊಸ ವಿಧಾನದಲ್ಲಿ ಕಥಾನಕ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಮಿಶ್ರ ಅವರ ದೇವದಾಸ್ ಭಾರತದ ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯನ್ನಾಧರಿಸಿ ಕಥೆ ಬೆಳವಣಿಗೆ ಹೊಂದಲಿದೆ. ಪ್ರೀತೀಶ್ ನಂದಿ ಕಮ್ಯುನಿಕೇಷನ್ಸ್ ಈ ಚಿತ್ರವನ್ನು ನಿರ್ಮಿಸಲಿದೆ.
ಪ್ರಸ್ತುತ ದೇವದಾಸ್‌ನಲ್ಲಿ ಶೈನಿ ಅಹುಜಾ ದೇವದಾಸ್ ಚಿತ್ರಣ ನೀಡಲಿದ್ದಾರೆ. ಇತರ ತಾರಾಗಣ ಇವನ್ನಷ್ಟೇ ನಿರ್ಧರಿಸಲ್ಪಡಬೇಕಿದೆ. ಅಂತೂ ಹಿಂದಿ ಚಿತ್ರರಂಗದಲ್ಲಿ ದೇವದಾಸ್ ಚಿತ್ರಗಳ ಧಾರಾವಾಹಿ ಹರಿದು ಬರಲಿದೆ. ಏಕಕಾಲದಲ್ಲಿ ಬಿಡುಗಡೆಯ ಪೈಪೋಟಿಯನ್ನೂ ನಿರೀಕ್ಷಿಸಬಹುದು.
ಹಿಂದೊಮ್ಮೆ ಭಗತ್ ಸಿಂಗ್ ಕಥಾನಕದ ಚಿತ್ರಗಳು ಕೂಡ ಸಾಲು ಸರದಿ ಹಿಡಿದಿದ್ದುವು. ಸ್ವಾತಂತ್ರ್ಯ ಯೋಧ ಭಗತ್ ಸಿಂಗ್‌ರ ಜೀವನ ಕಥೆಯನ್ನಾಧರಿಸಿದ ಸಿನಿಮಾಗಳು ಬಹಳ ಸಂಖ್ಯೆಯಲ್ಲಿ ಹೊರಹೊಮ್ಮಿದ್ದವು.