Publish Date: Sun, 24 Jun 2007 (14:55 IST)
Updated Date: Sun, 24 Jun 2007 (14:54 IST)
ಫೈಟ್ ಕ್ಲಬ್ ಮತ್ತು ಮರ್ಡರ್ ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಮಿಷಾ ಪಟೇಲ್ ಸಹೋದರ ಅಶ್ಮಿತ್ ಪಟೇಲ್ ತಾನು ನಿಜ ಜೀವನದಲ್ಲಿ ಸಭ್ಯ ವ್ಯಕ್ತಿ ಎಂದು ಘೋಷಿಸಿದ್ದಾನೆ.
ನನ್ನಲ್ಲಿ ಕೆಟ್ಟ ಗುಣಗಳು ಇಲ್ಲ ಎಂದು ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಹೇಳಿದ್ದಾನೆ.ಸದ್ಯ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದೆನೆ ಪ್ಲ್ಯಾಗ್ ಚಿತ್ರ 1942ರಲ್ಲಿ ಬ್ರಿಟಿಷರ ವಿರುದ್ದ ಹೋರಾಡುವ ಗ್ರಾಮದ ಕಥೆಯನ್ನು ಒಳಗೊಂಡಿದೆ.
ಕಹಿಂ ಕುತೂಹಲಕಾರಿ ಕಥೆಯನ್ನಾಧರಿಸಿದೆ. ಬೈಕ್ ಮೇಲೆ ಪ್ರವಾಸ ಮಾಡುವ ಯುವಕರು ವಿಚಿತ್ರ ಅನುಭವ ಪಡೆಯಬೇಕಾಗುತ್ತದೆ.ಇನ್ನೊಂದು ಚಿತ್ರ ಪ್ರೆಂಡ್ಸ್ ಫಾರ್ ಎವರ್ ಕಾಲೇಜು ಜೀವನದಲ್ಲಿನ ರೊಮ್ಯಾಂಟಿಕ್ ಚಿತ್ರ ಎಂದು ತಾವು ನಟಿಸುತ್ತಿರುವ ಚಿತ್ರಗಳ ಕುರಿತು ವಿವರ ನೀಡಿದ್ದಾರೆ.