Select Your Language

Notifications

webdunia
webdunia
webdunia
webdunia

ನಾನು ಯಾರಿಗೂ ಗಾಡ್ ಫಾದರ್ ಅಲ್ಲ ಅಂದ್ರು ಸಲ್ಮಾನ್ ಖಾನ್ !

ಬಾಲಿವುಡ್
, ಸೋಮವಾರ, 20 ಜನವರಿ 2014 (12:16 IST)
PR
ಬಾಲಿವುಡ್ ನಲ್ಲಿ ನಿಮಿಷವೂ ಬಿಡುವಿಲ್ಲದ ನಟ ಅಂದರೆ ಸಲ್ಮಾನ್ ಖಾನ್. ಅವರು ತಮ್ಮ ಅಂತಹ ಬ್ಯುಸಿಯೆಸ್ಟ್ ಬದುಕಲ್ಲೂ ಸಹ ಆತ ಹೊಸ ತಾರೆಯರಿಗೆ ಸಿನಿಮಾಗಳಲ್ಲಿ ಅವಕಾಶಗಳನ್ನು ನೀಡುತ್ತಿದ್ದಾರೆ. ಅವರು ಬೆಳೆಯುವಂತೆ ಮಾಡುತ್ತಿದ್ದಾರೆ. ಸೋನಾಕ್ಷಿ ಸಿನ್ಹ, ಕತ್ರಿನಾ ಕೈಫ್ ರನ್ನು ಯಾವ ರೀತಿ ಬೆಳೆಸಿದರೋ ಅದರಂತೆ ದಕ್ಷಿಣ ಭಾರತದ ನಟಿಯರ ಕೆರಿಯರ್ ಬೆಳೆಯಲು ಅವಕಾಶ ಮಾಡಿಕೊಟ್ಟರು. ಈ ಬಗ್ಗೆ ಅವರು ಹೇಳುವುದಿಷ್ಟೇ, ನಾನು ಯಾರಿಗೆ ಆಗಲಿ ಅವಕಾಶ ನೀಡಿದ್ದೆ ಅಂದ್ರೆ ಅವರ ಗಾಡ್ ಫಾದರ್ ಆದೆ ಎಂಬುದು ಇದರ ಅರ್ಥವಲ್ಲ.

ನಾನು ಅವರೊಂದಿಗೆ ಕೆಲಸ ಮಾಡುವುದಕ್ಕೆ ಆಸೆ ಪಟ್ಟಿದ್ದೇನೆ, ಅವರು ನನಗೆ ಇಷ್ಟ ಆದರು ಎಂಬುದೇ ಆಗಿದೆ ಎನ್ನುವ ಮಾತು ಹೇಳಿದ್ದಾರೆ ಸಲ್ಲು. ಯಾವುದೋ ಒಂದು ಕಾಲದಲ್ಲಿ ಒಬ್ಬರು ನನಗೆ ಅವಕಾಶ ನೀಡಿ ನನ್ನನ್ನು ಬೆಳೆಸಿದರು , ಅದೇ ರೀತಿ ನಾನು ಅವಕಾಶಗಳನ್ನು ನೀಡಿ ಯಾಕೆ ಬೆಳಸಬಾರದು. ಆದ್ದರಿಂದ ಇಂತಹ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸ ಮಾಡುವುದಕ್ಕೆ ಹೆಚ್ಚಿನ ಖುಷಿ ಆಗಿದೆ. ಆ ರೀತಿಯ ಪರಿಚಯ ಮಾಡಿದ ಬಳಿಕ ನನ್ನ ಬಗ್ಗೆ ಎದುರಾಗುವ ಆರೋಪಗಳ ಬಗ್ಗೆ ನಾನೇನು ಹೇಳಲಾರೆ ಎಂದಿದ್ದಾರೆ ಸಲ್ಮಾನ್. ಇತ್ತೀಚಿಗೆ ಜೈ ಹೊ ಚಿತ್ರಕ್ಕೆ ಸಂಬಂಧಪಟ್ಟಂತೆ ಡೈಸಿ ಷಾ ಬಗ್ಗೆ ಕೇಳಿದ ಪ್ರಶ್ನೆಗೆ ಆತ ಸಮಾಧಾನಚಿತ್ತರಾಗಿ ಉತ್ತರಿಸಿದರು. ಆಕೆ ಸಲ್ಲು ಬಳಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು, ಅಲ್ಲದೆ ಕೊರಿಯಾಗ್ರಾಫರ್ ಸಹ ಆಗಿದ್ದಾರೆ. ಆ ಕಾರಣದಿಂದ ಆಕೆಯನ್ನು ಸಲ್ಮಾನ್ ತಮ್ಮ ಚಿತ್ರದಲ್ಲಿ ಪರಿಚಯಿಸಿದ್ದಾರೆ. ಅದನ್ನು ಬೇರೆ ರೀತಿ ಅರ್ಥೈಸಿ ಕೊಂಡವರಿಗೆ ಸಲ್ಮಾನ್ ಮೇಲೆ ತಿಳಿಸಿದಂತೆ ಹೇಳಿದ್ದಾರೆ.

Share this Story:

Follow Webdunia kannada