Article Bollywood Gossips %e0%b2%a8%e0%b2%be%e0%b2%a8%e0%b3%81 %e0%b2%ae%e0%b2%be%e0%b2%a1%e0%b2%b2%e0%b3%8d%e0%b2%b2 %e0%b2%a8%e0%b2%a8%e0%b3%8d %e0%b2%95%e0%b3%88%e0%b2%b2%e0%b2%bf %e0%b2%86%e0%b2%97%e0%b2%b2%e0%b3%8d%e0%b2%b2 113111200008_1.htm

Daily Horoscope

Select Your Language

Notifications

webdunia
webdunia
webdunia
webdunia

ನಾನು ಮಾಡಲ್ಲ ನನ್ ಕೈಲಿ ಆಗಲ್ಲ !

ರಾಮ್ ಚರಣ್ ತೇಜಾ
PR
ರಾಮ್ ಚರಣ್ ತೇಜಾ ಗೆ ವೆಂಕಟೇಶ್ ಅಪಮಾನ ಮಾಡಿದರಂತೆ. ಈಗ ಇಡಿ ಟಾಲಿವುಡ್ ನಲ್ಲಿ ಇದೆ ಸುದ್ದಿ. ಇಬ್ಬರು ಮಹಾನ್ ತಾರೆಯರ ನಡುವೆ ಇದೇನಪ್ಪ ಹಿಂಗಾ ಅಂತ ನೀವು ನಾವು ಬೇಸರದಿಂದ ಅಂದುಕೊಳ್ತಾ ಇದ್ದಿವಿ. ಆದರೇ ಹೇಳಿ ಬಣ್ಣ ಹಚ್ಚಿ ಒಳ್ಳೆಯ- ಆದರ್ಶವಂತ ಪಾತ್ರಗಳನ್ನೂ ಮಾಡಿದಷ್ಟು ಸುಲಭವಾಗಿ ಹೋಗಲ್ಲ ಹುಟ್ಟು ಗುಣ! ವೆಂಕಟೇಶ್ ಕಥೆನು ಸಹ. ತೂಫಾನ್ ಹಾಗೂ ಜಂಜೀರ್ ಸಿನಿಮಾದಿಂದ ಕೆಟ್ಟ ಸೋಲು ಅನುಭವಿಸಿರುವ ಮಗಧೀರ ರಾಮ್ ಚರಣ್ , ವೆಂಕಟೇಶ್ ಮತ್ತು ತನ್ನ ಜೋಡಿಯ ಚಿತ್ರದಿಂದ ತಾರಾ ಬದುಕಲ್ಲಿ ಹೊಸ ತಿರುವು ಬರ ಬಹುದು ಎಂದು ಕಾದಿದ್ದೆ ಬಂತು ಆದರೆ ಆತನಿಗೆ ವೆಂಕಟೇಶ್ ನಿರಾಸೆ ಮಾಡಿದ್ದಾರೆ. ಹೌದು ಹಾಗಾದರೆ ಆಗಿದ್ದಾದರೂ ಏನು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಕೋ ಇಲ್ಲಿದೆ... ರಾಮ್ ಚರಣ್ ಕೃಷ್ಣವಂಶಿ ನಿರ್ದೇಶನದಲ್ಲಿ ಮಲ್ಟಿ ಸ್ಟಾರರ್ ಚಿತ್ರವು ಸೆಟ್ಟೆರುತ್ತಿರುವ ಸಂಗತಿ ನಿಮಗೆಲ್ಲಾ ತಿಳಿದೇ ಇದೆ.

ಈ ಸಿನಿಮಾದಲ್ಲಿ ಅತ್ಯಂತ ಪವರ್ ಫುಲ್ ಪಾತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಆ ಸಿನಿಮಾದ ಬಗ್ಗೆನೇ ಟಾಲಿವುಡ್ ಮಂದಿ ಹೆಚ್ಚು ಮಾತನಾಡುತ್ತಿರುವುದು. ವೆಂಕಟೇಶ್ ಈ ಸಿನಿಮಾದಲ್ಲಿ ನಟಿಸಲಾರೆ ಎಂದು ಹೇಳಿದ್ದಾರಂತೆ ಕೃಷ್ಣ ವಂಶಿಗೆ . ನನ್ನ ವಯಸ್ಸೇನು ರಾಮ್ ವಯಸ್ಸೇನು. ನಾನು ಆತನ ಅಂಕಲ್ ಆಗಿ ನಟಿಸಲಾರೆ, ಇದರಿಂದ ನನ್ನ ಸ್ಟಾರ್ ಡಂ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರಂತೆ ವೆಂಕಿ.

ಇದರಿಂದ ಕೃಷ್ಣವಂಶಿ ಮಾತ್ರವಲ್ಲದೆ ರಾಮ್ ಚರಣ್ ಸಹ ಶಾಕ್ ಆಗಿದ್ದಾರಂತೆ. ಕಾರಣ ಇಷ್ಟೇ ವೆಂಕಟೇಶ್ ಮತ್ತು ರಾಮ್ ಪಾತ್ರಗಳಿಗೆ ಹೊಂದುವಂತೆ ಕಥೆ ಸಿದ್ಧ ಆಗಿದೆ. ಈಗ ಅದಕ್ಕೆ ತಕ್ಕಂತೆ ಸೆಟ್ ಸಿದ್ಧತೆ ಆಗಿದೆ. ಏಕಾಏಕಿ ನಾನು ಈ ಪಾತ್ರ ಮಾಡಲ್ಲ ಎಂದು ವೆಂಕಿ ಅಂದರೆ ಪಾಪ ನಿರ್ದೇಶಕನ ಪಾಡೇನು. ಇದನ್ನು ದೊಡ್ಡವರ ಸಣ್ಣತನ ಅನ್ನ ಬಹುದಾ?

Share this Story:

Follow Webdunia kannada