Publish Date: Mon, 03 Dec 2007 (14:01 IST)
Updated Date: Mon, 03 Dec 2007 (14:01 IST)
ಗೋಲ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಾನು ಮತ್ತು ಅರ್ಶದ್ ವಾರ್ಸಿ ಇಂಗ್ಲೆಂಡ್‌ನಲ್ಲಿ ಸಿಗ್ನಲ್ ಬಳಿಯಲ್ಲಿ ನಿಂತುಕೊಂಡಿದ್ದೆವು, ಕಾರಿನಲ್ಲಿದ್ದ ವಿಚಿತ್ರವಾಗಿ ಬಟ್ಟೆ ಧರಿಸಿದ್ದ ಇಬ್ಬರು ಬಿಳಿಯ ಹುಡುಗರು, ನಮ್ಮ ಕಡೆ ನೋಡಿ ಅಸಹ್ಯವಾದ ಹಾಡುಗಳ ಮೂಲಕ ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ಇದು ನಮ್ಮನ್ನು ಅವಮಾನ ಮಾಡುವ ವಿಶಿಷ್ಟವಾದ ರೀತಿಯಾಗಿತ್ತು ಎಂದು ಬಿಪಾಶಾ ಹೇಳಿದ್ದಾರೆ.
ಬಿಪಾಶಾ ಹೇಳುವ ಪ್ರಕಾರ, ತಾನು ಮಹಿಳೆಯಾಗಿದ್ದು, ಮತ್ತು ಕೀರ್ತಿಯನ್ನು ಪಡೆದಿದ್ದರೂ ಅವಮಾನದ ಬಗ್ಗೆ ಯಾವತ್ತೂ ಬೇಸರಪಟ್ಟುಕೊಂಡಿರಲಿಲ್ಲ. ಇದು ಏನಾಗುತ್ತಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಯಿತು. ಅವರು ಹಾಡುತ್ತಿರುವಂತೆ ನಾನು ಮತ್ತು ಅರ್ಶದ್ ಏನೂ ಮಾಡಲು ತೋಚದವರಂತೆ ಒಬ್ಬರನ್ನೊಬ್ಬರು ನೋಡುತ್ತಾ ನಿಂತೆವು. ಇದುಸೌತ್‌ಹಾಲ್‌ನಲ್ಲಿರುವ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಏಶಿಯನ್ ಪ್ರದೇಶವಾಗಿತ್ತು.ಅವರು ನಮ್ಮನ್ನು 'ಪಾಕಿಸ್' ಮತ್ತು ಇನ್ನೂ ಅನೇಕ ಅಸಹ್ಯ ಶಬ್ದಗಳಿಂದ ಸಂಬೋಧಿಸಿದರು.
ಏಶಿಯಾ ಮತ್ತು ಬ್ರಿಟನ್ ಜನರು ಇಂತಹ ಘಟನೆಗಳನ್ನು ಸಾಮಾನ್ಯ ಎಂಬಂತೆ ಪರಿಗಣಿಸಿರುವುದರ ಬಗ್ಗೆ ಬಿಪಾಶಾ ದಿಗ್ಭ್ರಮೆಗೊಂಡಿದ್ದರು. ಇದೇನು ಗಾಬರಿಗೊಳ್ಳುವಂತಹ ವಿಷಯವಲ್ಲ. ನಿಮಗೆ ಯುಕೆಗೆ ಯಾವತ್ತೂ ಸ್ವಾಗತ ಎಂದು ಅವರು ಹೇಳಿದ್ದಾರೆ. ಆದರೆ ಯಾವುದೇ ಪಂಗಡ ಅಥವಾ ಜನರು ಅಂತಹ ನಿಂದನೆಯನ್ನು ಹೇಗೆ ಸಹಿಸುತ್ತಾರೆ ಎಂಬುದಾಗಿ ಬಿಪಾಶಾ ತಿಳಿಸಿದ್ದಾರೆ.