Select Your Language

Notifications

webdunia
webdunia
webdunia
webdunia

ನಾನು ಗರ್ಲ್‌ಫ್ರೆಂಡ್‌ಗಳೊಂದಿಗೆ ಯಾವತ್ತೂ ಸೆಕ್ಸ್‌ನಲ್ಲಿ ಬಾಗಿಯಾಗಿಲ್ಲ: ಸಲ್ಮಾನ್ ಖಾನ್

ಸಲ್ಮಾನ್ ಖಾನ್
ನವದೆಹಲಿ , ಸೋಮವಾರ, 31 ಮಾರ್ಚ್ 2014 (19:22 IST)
ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ನಾನು ಯಾವುದೇ ಗರ್ಲ್‌ಫ್ರೆಂಡ್‌ಗಳ ಜೊತೆಯಲ್ಲಿ ಸೆಕ್ಸ್‌ನಲ್ಲಿ ಭಾಗಿಯಾಗಿಲ್ಲ. ನಾನೊಬ್ಬ ಅಪ್ಪಟ ಬ್ರಹ್ಮಚಾರಿ ಎಂದು ಬಾಲಿವುಡ್ ಬ್ಲಾಕ್ ಬಸ್ಟರ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೇಳಿದ್ದಾರೆ.

ಕಾಪಿ ವಿಥ್ ಕರಣ್ ಸೆಲೆಬ್ರಿಟಿ ಶೋ ಕಾರ್ಯಕ್ರಮದಲ್ಲಿ ಭಾಗಿಯಾದ ಸಲ್ಮಾನ್, ತಮ್ಮ ರೋಮ್ಯಾಂಟಿಕ ಜೀವನದ ಒಂದೊಂದು ಸವಿಗಳಿಗೆಗಳನ್ನು ಬಿಚ್ಚಿಟ್ಟಿದ್ದಾರೆ.

ಹಲವಾರು ಯುವತಿಯರೊಂದಿಗೆ ಅಫೇರ್ ಹೊಂದಿದ ವ್ಯಕ್ತಿ ವರ್ಜಿನ್ ಆಗಿರಲು ಹೇಗೆ ಸಾಧ್ಯ ಎನ್ನುವುದು ಪ್ರತಿಯೊಬ್ಬರ ಪ್ರಶ್ನೆಯಾಗಿರುತ್ತದೆ. ಆದರೆ ,ಸಲ್ಮಾನ್ ಖಾನ್‌ದೊಂದು ವಿಚಿತ್ರ ಪ್ರಕರಣವಾಗಿದೆ. ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರೊಂದಿಗೆ ಮನದಾಳವನ್ನು ಬಿಚ್ಚಿಟ್ಟ ಸಲ್ಮಾನ್, ನಾನು ಅಪ್ಪಟ ವರ್ಜಿನ್, ನನ್ನನ್ನು ಮದುವೆಯಾಗುವವಳಿಗೆ ಮಾತ್ರ ನನ್ನ ದೇಹ ಮೀಸಲು ಎಂದು ನುಲಿದಿದ್ದಾರೆ.

ಆರಂಭದಲ್ಲಿ ನಟಿ ಮಾಡೆಲ್ ಸಂಗೀತಾ ಬಿಜಲಾನಿಯನ್ನು ಮದುವೆಯಾಗಬೇಕು ಎಂದು ಒಪ್ಪಿಕೊಂಡಿದ್ದೆ. ಮದುವೆ ಕಾರ್ಡ್‌ಗಳು ಕೂಡಾ ಮುದ್ರಣಗೊಂಡು ಮದುವೆ ಸಿದ್ದತೆಗಳು ಆರಂಭಗೊಂಡಿದ್ದವು. ಆದರೆ, ಆಕೆ ನನ್ನನ್ನು ವಂಚಿಸಿರುವುದು ಬಹಿರಂಗವಾದಾಗ ಅವಳನ್ನು ನಿರಾಕರಿಸಿದೆ ಎಂದು ಸಲ್ಮಾನ್ ಗತ ಇತಿಹಾಸವನ್ನು ಬಯಲಿಗೆ ತಂದಿದ್ದಾರೆ.

Share this Story:

Follow Webdunia kannada