Select Your Language

Notifications

webdunia
webdunia
webdunia
webdunia

ನಾನು ಆರಾಮಿದ್ದೇನೆ.. ನಾನು ಬದುಕಿದ್ದೇನೆ ಎಂದ ಲತಾ ಮಂಗೇಶ್ಕರ್...!

ಲತಾ ಮಂಗೇಶ್ಕರ್
, ಗುರುವಾರ, 27 ಮಾರ್ಚ್ 2014 (09:06 IST)
PR
ನಮಸ್ಕಾರ್ ,ಮೇರಿ ತಬಿಯತ್ ಕೆ ಬಾರೆ ಮೇ ಅಪ್ಹಾಯಿನ್ ಫೇಲ್ ರಾಹಿ ಹೈ.ಪರ್ ಆಪ್ ಸಬ್ ಕ ಪ್ಯಾರ್ ಔರ್ ದುವಾಯಿ ಹೈ ಕಿ ಮೇರಿ ತಬಿಯತ್ ಬಿಲ್ಕುಲ್ ಟೀಕ್ ಹೈ- ಲತಾ ಮಂಗೇಶ್ಕರ್
ಸಾಮಾನ್ಯವಾಗಿ ಯಾರು ಏನೇ ಆದರು ಸಮಾಜಕ್ಕೆ ಬೇಜಾರಿಲ್ಲ, ಆದರೆ ಸಾಧಕರು ಏನೇ ಆದರು ಸಮಾಜ ಸಹಿಸಲ್ಲ ,ಇದು ಒಂದು ಕಡೆ ಇಡೋಣ.

ಒಂದಷ್ಟು ಅಂದಿಗೆ ಸದಾ ಗಾಳಿ ಸುದ್ದಿ ಹರಡಿಸುವ ಕಡೆಗೆ ಹೆಚ್ಚು ಗಮನ. ಅಂತೂ ಯಾರಾದರೊಬ್ಬರನ್ನು ಅವರು ಸಾಯಿಸಲೇ ಬೇಕು ಅವರ ಕೆಟ್ಟ ಖುಷಿ ಬದುಕಿರ ಬೇಕಾದರೆ. ಈಗ ಅಂತಹ ಕಿಡಿಗೇಡಿಗಳು ಮಾಡಿರುವ ಭಾನಗಡಿ ಅಂದ್ರೆ ಭಾರತ ಹೆಮ್ಮೆಯ ಹಾಡುಗಾರ್ತಿ ಲತಾ ಮಂಗೇಶ್ಕರ್ ಅವರನ್ನು ಸಾಯಿಸಿದ್ದು.

ಅವರಿಲ್ಲ ಎನ್ನುವ ಸುದ್ದಿ ನಿನ್ನೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಹರಡಿತ್ತು. ಇದರಿಂದ ಲತಾಜಿ ಅವರ ಅಭಿಮಾನಿಗಳು ಗಾಬರಿ ಆದಾಗ ಸ್ವಯಂ ಲತಾಜಿ ಟ್ವೀಟ್ಟರ್ ನಲ್ಲಿ ಮೇಲೆ ತಿಳಿಸಿದಂತೆ ಬರೆದು ಅಭಿಮಾನಿಗಳ ಹೆದರಿಕೆ ಮತ್ತು ನೋವನ್ನು ದೂರ ಮಾಡಿದ್ದಾರೆ.

webdunia
PR
ಅದೇ ಸಮಯದಲ್ಲಿ ಇತ್ತೀಚೆಗಷ್ಟೇ ಮರಣ ಹೊಂದಿದ ಹಿರಿಯ ನಟಿ ನಂದ ಅವರನ್ನು ನೆನಪಿಸಿ ಕೊಂಡರು. ನಂದ ಅವರ ತಂದೆ ವಿನಾಯಕ ದಾಮೋದರ್ ಅವರ ಕಂಪನಿಯಲ್ಲಿ ಕೆಲಸ ಮಾಡುವಾಗ ಲತಾಜಿ ಅವರು ಮೊಟ್ಟ ಮೊದಲ ಬಾರಿಗೆನಂದ ಅವರನ್ನು ಭೇಟಿ ಮಾಡಿದ್ದಂತೆ. ನಾವಿಬ್ಬರು ಅತ್ಯುತ್ತಮ ಸ್ನೇಹಿತೆಯರಾಗಿದ್ದೆವು ಎನ್ನುವ ಅಂಶವನ್ನು ಈ ಸಮಯದಲ್ಲಿ ಅವರು ಹೇಳಿದರು.

ನಂದಳಂತಹ ಮಹಾನ್ ಕಲಾವಿದೆಯ ಮರಣ ಅತ್ಯಂತ ದುಃಖ ಉಂಟು ಮಾಡಿದೆ. ನಾನು ಆಕೆಯನ್ನು ಬೇಬಿ ನಂದ ಎಂದು ಕರೆಯುತ್ತಿದ್ದುದು. ಆಕೆ ನನಗಿಂತ 4-5ಗಳಷ್ಟು ಚಿಕ್ಕವಳು. ಚಿತ್ರ ಒಂದರಲ್ಲಿ ಆಕೆ ನನ್ನ ತಮ್ಮನ ಪಾತ್ರ ಮಾಡಿದ್ದಳು. ನಾನು ವಿನಾಯಕ ದಾಮೋದರ್ ಕಂಪನಿಯಲ್ಲಿ 1943.ವರೆಗೂ ಬಾಲ ನಟಿಯಾಗಿದ್ದೆ. ನಾನು ನಂದಳ ಅಕ್ಕ ಮೀನಾ ಮತ್ತು ನಂದ ಮೂರು ಜನ ಅತ್ಯುತ್ತಮ ಸ್ನೇಹಿತೆಯರಾಗಿದ್ದೆವು ಎಂದು ಈ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಮೆಲಕು ಹಾಕಿದರು 84ರ ಹರೆಯ ಲತಾಜಿ.

Share this Story:

Follow Webdunia kannada