"ನಾಚ್ ಬಲಿಯೇ 3"ನಲ್ಲಿ ಮಾಧುರಿ ದೀಕ್ಷಿತ್
Publish Date: Thu, 22 Nov 2007 (18:11 IST)
Updated Date: Thu, 22 Nov 2007 (18:11 IST)
ಬಹಳ ಸುದೀರ್ಘ ಸಮಯದ ನಂತರ ಯಶ್‌ರಾಜ್ ಅವರ ಆಜಾ ನಾಚ್ಲೇ ಮೂಲಕ ಬಾಲಿವುಡ್‌ಗೆ ಮರಳಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ಶನಿವಾರ ಸ್ಟಾರ್‌ಪ್ಲಸ್‌ನ "ನಾಚ್ ಬಲಿಯೆ 3" ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಕುನಾಲ್ ಕಪೂರ್ ಮತ್ತು ಕೊಂಕಣ ಸೇನ್ ಶರ್ಮ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, "ನಚ್ ಬಲಿಯೆ 3" ಯಶ್‌ರಾಜ್ ಹಿಟ್ ನೃತ್ಯಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ನೃತ್ಯಜೋಡಿಗಳಿಗೆ ಸ್ಫೂರ್ತಿ ತುಂಬುವುದು ಖಚಿತವಾಗಿದೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳಲ್ಲಿ " ದಿಲ್‌ಚಸ್ಪ್ ", " ಮಸ್ತ್ " ಮತ್ತು " ಜಬರ್‌ದಸ್ತ್ " ಎಂಬುದಾಗಿ ಅವರಿಬ್ಬರೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಜೋಡಿಗಳನ್ನು ಆಯ್ಕೆ ಮಾಡಲಿದ್ದಾರೆ. ಈ ನೃತ್ಯಜೋಡಿಗಳಿಗಾಗಿ ಮುಂದಿನವಾರ ನಡೆಯಲಿರುವ ಆಜಾ ನಾಚ್ಲೇ ಸ್ಪರ್ಧೆಯಲ್ಲಿ ಭಾಗವಹಿಸಲು ಮಾಧುರಿ ದೀಕ್ಷಿತ್ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೆ ವಿಜೇತರ ಹೆಸರನ್ನೂ ಇವರು ಘೋಷಿಸಲಿದ್ದಾರೆ.