ನರೇಂದ್ರ ಮೋದಿಯನ್ನು ಹೊಗಳಿದ್ದಕ್ಕಾಗಿ ಸಲ್ಮಾನ್‌ಖಾನ್‌ಗೆ ಬಹಿಷ್ಕಾರ ಹಾಕಿದ ಮುಸ್ಲಿಂ ಮುಖಂಡರು
ನವದೆಹಲಿ , ಮಂಗಳವಾರ, 28 ಜನವರಿ 2014 (13:08 IST)
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಹೊಗಳಿದ್ದ ಸಲ್ಮಾನ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ ಎಂದು ಕೆಲ ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.ಸಲ್ಮಾನ್‌ಖಾನ್ ಜಾಹಿರಾತಿನಲ್ಲಿ ತೋರಿಸುತ್ತಿರುವ ಮಾರುಕಟ್ಟೆಯ ಉತ್ಪನ್ನಗಳನ್ನು ಕೂಡಾ ಬಹಿಷ್ಕರಿಸಬೇಕು ಎಂದು ಜನತೆಗೆ ಮೌಲ್ವಿಗಳು ಕರೆನೀಡಿದ್ದಾರೆ. ನಗರದ ಬೆಂಡಿ ಬಜಾರ್‌ನಲ್ಲಿರುವ ಆಲ್ ಇಂಡಿಯಾ ಉಲೇಮಾ ಕೌನ್ಸಿಲ್ ಮಸೀದಿಯ ಮುಖ್ಯ ಮೌಲ್ವಿ ಮೌಲಾನಾ ಎಜಾಜ್ ಕಾಶ್ಮಿರಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಾಲಿವುಡ್ ನಟ ಸಲ್ಮಾನ್ ಖಾನ್ 200ರಲ್ಲಿ ನಡೆದ ಗುಜರಾತ್ ದಂಗೆಯ ಬಗ್ಗೆ ಮೋದಿ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ಉದ್ಧಟತನದ ವರ್ತನೆ. ಆದ್ದರಿಂದ ಮುಸ್ಲಿಂ ಸಮುದಾಯಜ ಕ್ಷಮೆ ಕೇಳುವವರೆಗೆ ಅವರ ಚಿತ್ರಗಳನ್ನು ಬಹಿಷ್ಕರಿಸಬೇಕು ಎಂದು ಫತ್ವಾ ಹೊರಡಿಸಿದ್ದಾಗಿ ತಿಳಿಸಿದ್ದಾರೆ. ಜೈಹೋ ಚಿತ್ರದ ಪ್ರಚಾರಕ್ಕಾಗಿ ಗುಜರಾತ್‌ಗೆ ಭೇಟಿ ನೀಡಿದ್ದ ಸಲ್ಮಾನ್ ಖಾನ್ ಮುಖ್ಯಮಂತ್ರಿ ಅವರೊಂದಿಗೆ ಗಾಳಿಪಟ ಹಾರಿಸಿದ್ದರು. ಗುಜರಾತ್ ದಂಗೆಯ ಬಗ್ಗೆ ನ್ಯಾಯಾಲಯ ಮೋದಿಯವರನ್ನು ನಿರಪರಾಧಿ ಎಂದು ಘೋಷಿಸಿದ್ದರಿಂದ ಅವರು ಮುಸ್ಲಿಂ ಸಮುದಾಯದ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.