Article Bollywood Gossips %e0%b2%a8%e0%b2%ae%e0%b3%8d%e0%b2%ae %e0%b2%b8%e0%b2%82%e0%b2%b8%e0%b2%be%e0%b2%b0 %e0%b2%b8%e0%b2%b0%e0%b2%bf%e0%b2%af%e0%b2%be%e0%b2%97%e0%b2%bf%e0%b2%af%e0%b3%87 %e0%b2%87%e0%b2%a6%e0%b3%86 %e0%b2%b6%e0%b2%bf%e0%b2%b2%e0%b3%8d%e0%b2%aa%e0%b2%be %e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf 111070500048_1.htm

Daily Horoscope

Select Your Language

Notifications

webdunia
webdunia
webdunia
webdunia

ನಮ್ಮ ಸಂಸಾರ ಸರಿಯಾಗಿಯೇ ಇದೆ; ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ
PR
ನಾನಿನ್ನೂ ಗರ್ಭಿಣಿಯಾಗಿಲ್ಲ ಎಂದು ಆವೇಶದಿಂದ ಹೇಳಿ ಭಾರೀ ಸುದ್ದಿ ಮಾಡಿದ್ದ ಬಾಲಿವುಡ್‌ನ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಸಾಂಸಾರಿಕ ಜೀವನವನ್ನು ಪ್ರಸ್ಥಾಪಿಸಿರುವ ಮಾಧ್ಯಮಗಳ ಮೇಲೆ ಮುನಿಸಿಕೊಂಡಿರುವ ನಟಿ, ನಾನು ಮತ್ತು ನನ್ನ ಗಂಡ ರಾಜ್ ಕುಂದ್ರಾ ನಡುವೆ ಎಲ್ಲವೂ ಸರಿಯಾಗಿಯೇ ಇದೆ. ನಮ್ಮ ಸಾಂಸಾರಿಕ ಜೀವನ ಸುಗಮವಾಗಿ ಸಾಗಿದೆ. ಸದ್ಯಕ್ಕೆ ನಾವಿಬ್ಬರೂ ಅಮೇರಿಕಾ ಪ್ರವಾಸದಲ್ಲಿದ್ದೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಮುಂದುವರಿದು, ಸುಮ್ ಸುಮ್ನೆ ಏನೆಲ್ಲಾ ಆಡ್ಕೋಬೇಡಿ ಎಂದು ಮಾಧ್ಯಮಗಳ ಮೇಲೆ ಮುನಿಸಿಕೊಂಡಿರುವ ನಟಿ, ಮತ್ತೊಮ್ಮೆ ನಾನಿನ್ನೂ ಗರ್ಭಿಣಿಯಾಗಿಲ್ಲ ಎಂದು ಪುನರ್ ಉಚ್ಚರಿಸಿದ್ದಾರೆ.

ಆರಂಭದಲ್ಲಿ ನಾನು ಗರ್ಭಿಣಿಯಾಗಿದ್ದೇನೆ ಎಂಬ ಸುಳ್ಳು ಸುದ್ಧಿ ಹರಡಿದ್ದರು, ಇದೀಗ ನನ್ನ ಪತಿಗೆ ಬೇರೊಂದು ಸಂಬಂಧವಿದೆ ಎಂಬ ಸುದ್ದಿ ಎಬ್ಬಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ ಶಿಲ್ಪಾಶೆಟ್ಟಿ.

ಲಂಡನ್ನಿನ ಕೂದಲು ಮರುಜೋಡಣಾ ಚಿಕಿತ್ಸಾಲಯದ ಸಹಾಯಕಿ ಆಕರ್ಷಕ ಯುವತಿಯನ್ನು ಸಂಧಿಸಿದ ಕುಂದ್ರಾ, ಆಕೆಯೊಂದಿಗೆ ಯುರೋಪ್ ಪ್ರವಾಸ ಕೈಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನು ಅಲ್ಲಗಳೆದಿರುವ ಶಿಲ್ಪಾ, ತನ್ನ ಪತಿಯೊಂದಿಗೆ ಅಮೇರಿಕಾ ಪ್ರವಾಸದಲ್ಲಿದ್ದೇನೆ, ಸುಮ್ ಸುಮ್ನೆ ಓಳು ಬಿಡೊ ಪೇಪರು ಎಂದು ಕಿಚಾಯಿಸಿದ್ದಾರೆ.

Share this Story:

Follow Webdunia kannada