Publish Date: Mon, 11 Nov 2013 (13:36 IST)Updated Date: Mon, 11 Nov 2013 (13:35 IST)
PR
ಸದ್ಯದಲ್ಲೇ ಬಿಡುಗಡೆ ಆಗುತ್ತಿರುವ ಡೆಡ್ ಇಷ್ಕಿಯಾ ಚಿತ್ರದಲ್ಲಿ ತನ್ನ ಹೆಂಡತಿ ಮಾಧುರಿ ದೀಕ್ಷಿತ್ ಫಸ್ಟ್ ಲುಕ್ ನಲ್ಲಿ ಅದ್ಭುತವಾಗಿ ಇದ್ದಾಳೆ ಎಂದು ಆಕೆಯ ಪತಿ ಡಾ. ಶ್ರೀರಾಮ್ ನೆನೆ ಹೊಗಳಿದ್ದಾರೆ. ಮಾಧುರಿ ದೀಕ್ಷಿತ್, ನಾಸುರುದ್ದೀನ್ ಷಾ, ಹುಮಾ ಖುರೇಷಿ , ಅರ್ಶದ್ ವಾರ್ಸಿ, ಅವರು ನಟಿಸಿರುವ ಈ ಚಿತ್ರದ ಫಸ್ಟ್ ಲುಕ್ ಟ್ರೈಲರ್ ಶುಕ್ರವಾರ ಆನ್ ಲೈನ್ ನಲ್ಲಿ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಮಾಧುರಿ ಬೇಗಂ ಫರ ಅನ್ನುವ ಡ್ಯಾನ್ಸರ್ ಪಾತ್ರದಲ್ಲಿ ನಟಿಸಿದ್ದಾರೆ.
ಡಾ. ನೆನೆ ತನ್ನನ್ನು ತುಂಬಾ ಪ್ರಶಂಸೆ ಮಾಡಿದ್ದಾರೆ. ತಾನು ಸಿನಿಮಾ ಪೋಸ್ಟರ್ ಮತ್ತು ಪ್ರೋಮೊದಲ್ಲಿ ತುಂಬಾ ಚೆನ್ನಾಗಿ ಕಾಣುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಸಂಗತಿ ಪತ್ರಕರ್ತರ ಮುಂದೆ ಹೇಳಿದ್ದು ಶ್ರೀಮತಿ ನೆನೆ.
ಮಾಧುರಿ ಮಕ್ಕಳಿಬ್ಬರಿಗೂ ಸಿನಿಮಾ ನೋಡಿ ಸಂತೋಷ ಆಗಿದೆಯಂತೆ. ಅಮ್ಮ ನೀನು ಈ ಚಿತ್ರದಲ್ಲಿ ಇದ್ದೀಯ, ಆ ಫೋಟೋದಲ್ಲಿ ಇದ್ದೀಯ ಎಂದು ಹೇಳುತ್ತಾ ಆಕೆ ತೋರಿಸುತ್ತಾರಣೆ. ಡೆಡ್ ಇಷ್ಕಿಯ ಚಿತ್ರ 2010ರಲ್ಲಿ ಬಂದ ಇಷ್ಕಿಯಾದ ಮುಂದುವರೆದ ಭಾಗ. ಇದು ಉತ್ತರ ಪ್ರದೇಶದ ಚಿಕ್ಕ ಪಟ್ಟಣದಲ್ಲಿ ನಡೆದ ಘಟನೆಯನ್ನು ಆಧರಿಸಿದ್ದ ಚಿತ್ರವಾಗಿತ್ತು. ಅಂದಂಗೆ ಡೆಡ್ ಬಿಡುಗಡೆ ಆಗೋದು ಮುಂದಿನ ವರ್ಷ.