ನನ್ನ ಮಗಳು ಮಾಡಿದ ಸಾಹಸದಿಂದ ನನಗೆ ತುಂಬಾ ಹೆಮ್ಮೆ ಆಗಿದೆ -ರಜನಿಕಾಂತ್
, ಮಂಗಳವಾರ, 8 ಏಪ್ರಿಲ್ 2014 (10:44 IST)
ನನ್ನ ತಂದೆಯಲ್ಲಿರುವ ಪ್ರಾಮಾಣಿಕತೆ , ಸರಳತೆ ಮತ್ತು ಒಳ್ಳೆಯ ಗುಣಗಳು ಅವರನ್ನು ಅಪಾರ ಸಂಖ್ಯೆಯ ಜನರು ಪ್ರೀತಿಸುವಂತೆ ಮಾಡಿದೆ. ನನ್ನ ತಂದೆ ಕೇವಲ ಮನೆಯವರಿಗೆ ಮಾತ್ರ ಆರಾಧ್ಯ ದೈವ ಅಲ್ಲವೇ ಅಲ್ಲ. ಅವರು ಅಪಾರ ಸಂಖ್ಯೆಯ ಜನರ ಮೆಚ್ಚಿನ ನಟ. ಅವರಿಗೆ ಮೇಲು ಕೀಳು ಎನ್ನುವ ಬೇಧಭಾವ ಇಲ್ಲ. ಶ್ರೀಮಂತರನ್ನು ಎಷ್ಟು ಆದರವಾಗಿ ಅ ಕಾಣುತ್ತಾರೋ ಅಷ್ಟೇ ಆದರ ಮತ್ತು ಪ್ರೀತಿಯಿಂದ ಬಡವರನ್ನು ಸಹ ಕಾಣುತ್ತಾರೆ. ಅವರು ಅತ್ಯಂತ ಸರಳಜೀವಿ. ಆದ ಕಾರಣ ಅವರ ಬಗ್ಗೆ ಹೆಚ್ಚಿನ ವಿಶ್ವಾಸ ಬೆಳೆದಿದೆ ಅವರ ಅಭಿಮಾನಿಗಳಲ್ಲಿ ಎಂದು ನಿರ್ಮಾಪಕಿ ಸೌಂದರ್ಯ ತನ್ನ ತಂದೆಯ ಬಗ್ಗೆ ಹೇಳಿದ್ದಾರೆ.ರಜನಿ ಕಾಂತ್ ಅವರು ತಮ್ಮ ವಿಶೇಷ ಗುಣಗಳಿಂದ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ತಮ್ಮ ಚಿತ್ರ ಸೋತರೆ ಅದರ ಹೊಣೆಯನ್ನು ಸಂಪೂರ್ಣವಾಗಿ ತಮ್ಮ ಮೇಲೆ ಹಾಕಿಕೊಂಡು ಆ ಚಿತ್ರತಂಡಕ್ಕೆ ನ್ಯಾಯ ಒದಗಿಸುವ ಮನಸ್ಥಿತಿ ಹೊಂದಿರುವಂತಹ ವ್ಯಕ್ತಿತ್ವ ಅವರದ್ದಾಗಿದೆ.
ರಜನಿಕಾಂತ್ ಅವರ ಬಗ್ಗೆ ಅನೇಕ ಜೋಕ್ ಗಳು ಚಾಲ್ತಿಯಲ್ಲಿವೆ. ಅದು ಅವರ ಪ್ರತಿಭೆಗೆ ಮತ್ತು ಅಭಿಮಾನಕ್ಕೆ ಸಂದ ಗೌರವ. ಅನೇಕ ಮಂದಿಗೆ ರಜನಿ ಅವರು ಏನು ಬೇಕಾದರೂ ಸಹ ಮಾಡ ಬಲ್ಲರು ಎನ್ನುವ ನಂಬಿಕೆ ಇದೆ. ಅಂತಹ ನಂಬಿಕೆ ನನಗು ಸಹ ಇದೆ. ಅವರೆಂದಿಗೂ ತಮ್ಮ ಸಮಕಾಲಿನರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ.