ನನ್ನ ಮಗನ ಆರೋಗ್ಯ ಈಗ ಸುಧಾರಿಸಿದೆ-ಇಮ್ರಾನ್ ಹಶ್ಮಿ
, ಗುರುವಾರ, 20 ಫೆಬ್ರವರಿ 2014 (10:32 IST)
ಮುತ್ತಿನ ಹೀರೋ ಇಮ್ರಾನ್ ಹಶ್ಮಿ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಅವರ ಮಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಗನ ಚಿಕಿತ್ಸೆಗಾಗಿ ಟೊರಂಟೋಗೆ ಹೋಗಿದ್ದ ಈ ನಟ ಈಗ ಬಾಲಿವುಡ್ ಗೆ ಹಿಂತಿರುಗಿ ತಮ್ಮ ಕ್ರೈಮ್ ಥ್ರಿಲ್ಲರ್ ಚಿತ್ರ ಮಿಸ್ಟರ್ ಎಕ್ಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ನನ್ನ ಮಗನ ಆರೋಗ್ಯ ಈಗ ಸುಧಾರಿಸಿದೆ. ಮುಂಬೈ ನಲ್ಲಿ ಟ್ಯೂಮರ್ ಆಪರೇಶನ್ ಮಾಡಿಸಿದಾಗಲು ಮತ್ತು ಟೊರಂಟೋ ಗೆ ಕರೆದುಕೊಂಡು ಹೋಗಿ ಕಿಮೊಥೆರಪಿ ಮಾಡಿಸಿದಾಗಲು ನನ್ನ ಮಗ ಉತ್ಸಾಹದಿಂದಲೇ ಇದ್ದ. ಆಪರೇಶನ್ ಆದ ದಿನ ಅವನು ಆಸ್ಪತ್ರೆಯಿಂದ ಖುಷಿಯಿಂದ ಓಡಾಡುತ್ತಾ ಕುಣಿದಾಡುತ್ತಾ ಇದ್ದ ಎನ್ನುವ ಸಂಗತಿ ಹೇಳಿದರು ಇಮ್ರಾನ್.