ನನ್ನ ಪ್ರೀತಿ ಬ್ರೇಕ್ ಅಪ್ ಆಗಲ್ಲ !
Publish Date: Thu, 17 Oct 2013 (11:09 IST)
Updated Date: Thu, 17 Oct 2013 (10:24 IST)
ಚೆನ್ನೈ ಬ್ಯೂಟಿ ಸಮಂತ ಸದಾ ನ್ಯೂಸ್ ನಲ್ಲಿ ಇರೋಕೆ ಇಷ್ಟ ಪಡೋ ನಟಿ ಮಣಿ. ತನ್ನ ರಾಶಿ ರಾಶಿ ರೂಪವನ್ನು ಕ್ಯಾಮರಾದ ಮುಂದೆ ಬಿಚ್ಚಿಡುವ ಸಂಗತಿ ಒಂದು ಕಡೆ ಇದ್ದರೆ ಸುಖಾಸುಮ್ಮನೆ ಅನೇಕ ವದಂತಿಗಳನ್ನು ಹರಡುವಂತೆ ಮಾಡಿ ಮತ್ತಷ್ಟು ಜನರ ಗಮನ ಸೆಳೆಯುವುದಲ್ಲಿ ಈಕೆ ಸದಾ ಬ್ಯುಸಿ. ಈಗ ಬಂದಿರೋ ಸುದ್ದಿ ಪ್ರಕಾರ ಈಕೆ ಸಿದ್ಧಾರ್ಥ್ ಜೊತೆ ಲವಿಡವಿ ಮಾತ್ರ ಮಾತ್ರವಲ್ಲ ಗುಟ್ಟಾಗಿ ಮದುವೆ ಸಹ ಆಗಿದ್ದಾಳೆ. ಆ ಬಗ್ಗೆ ಕೇಳಿದಾಗ ಆಕೆ ನನ್ನ ಮದ್ವೆ ಬಗ್ಗೆ ಅನೇಕ ಸಂಗತಿಗಳು ಹರಡಿವೆ. ನಾನು ಆತನೊಂದಿಗೆ ಲೀವಿನ್ ನಲ್ಲಿ ಇದ್ದೀನಿ, ಮದುವೆ ಆಗಿದಿನಿ ಹೀಗೆ ಒಂದಲ್ಲ ಒಂದು ರೀತಿ ಸುದ್ದಿ ಹರಡುತ್ತಿವೆ. ಆದರೆ ಇವೆಲ್ಲಾ ಸುಳ್ಳು ಎಂದು ನೇರವಾಗಿ ಮತ್ತು ಧೈರ್ಯವಾಗಿ ಹೇಳಿದ್ದಾಳೆ ಸಮಂತ . ಅಷ್ಟಕ್ಕೂ ಇಂತಹ ವಿಷಯಗಳನ್ನು ನಾನ್ಯಾಕೆ ಗುಟ್ಟಾಗಿ ಇಡ್ಲಿ ಎಂದು ಪ್ರಶ್ನೆ ಮಾಡಿದ್ದಾಳೆ ಈ ಚೆಲುವೆ. ಸದ್ಯಕ್ಕೆ ಮದುವೆ ಆಗೋ ಯೋಚನೆ ನನಗೆ ಇಲ್ಲ. ಸ್ವಲ್ಪ ವರ್ಷಗಳ ಬಳಿಕ ಅದರ ಬಗ್ಗೆ ಚಿಂತೆ ಮಾಡ್ತೀನಿ. ನಾನು ಮದುವೆ ಆಗುವ ಮುನ್ನ ಎಲ್ಲರಿಗೂ ಹೇಳೇ ಮದುವೆ ಆಗ್ತೀನಿ ಎಂದು ಗುಡುಗಿದ್ದಾಳೆ ಈ ಚೆಲುವೆ. ಮುಂದಿನ ವರ್ಷ ತಾನು ತಮಿಳು ಚಿತ್ರಗಳ ಕಡೆಗೆ ಗಮನ ನೀಡಲು ನಿರ್ಧರಿಸಿದ್ದೀನಿ ಮದುವೆ ಬಗ್ಗೆ ಅಲ್ಲ ಎಂದು ಹೇಳಿ ಆಕೆಯ ಅಭಿಮಾನಿಗಳಿಗೆ ನೆಮ್ಮದಿ ತಂದಿದ್ದಾಳೆ. ಮುಂದಿನ ವರ್ಷ ತಾನು ನಟಿಸಿರುವ ತೆಲುಗು ಚಿತ್ರ ಬಿಡುಗಡೆ ಆಗಲಿದ್ದು, ಸದ್ಯಕ್ಕೆ ಯಾವ ತೆಲುಗು ಚಿತ್ರವನ್ನು ಒಪ್ಪಿಲ್ಲ ಅಂದಿದಾರೆ. ನಿಮ್ಮ ಪ್ರಣಯ ಪ್ರಯಾಣ ಹೇಗೆ ಸಾಗಿದೆ ಎಂದು ಕೇಳಿದ ಪ್ರಶ್ನೆಗೆ ಹಾಯಾಗಿದೆ.. ಅದು ಎಂದಿಗೂ ಒಡೆಯಲ್ಲ ಎಂದೂ ಸಹ ಹೇಳಿದ್ದಾಳೆ.