ನನ್ನ ಪತಿ ಸಿದ್ಧಾರ್ಥ್ ಬೆಡ್ ರೂಂ ಗಿಂತ ಬೋರ್ಡ್ ರೂಂ ಇಷ್ಟ ಎಂಡ್ ವಿದ್ಯಾಬಾಲನ್ !
, ಸೋಮವಾರ, 10 ಮಾರ್ಚ್ 2014 (10:07 IST)
ತಾನು ಕೇವಲ ಹಾಟ್ ಸೀನ್ ಗಳಲ್ಲಿ ಮಾತ್ರವಲ್ಲ ಹ್ಯಾಟ್ ಟಾಪಿಕ್ ಗಳ ಬಗ್ಗೆ ಸಹ ಆರಾಮವಾಗಿ ಮಾತಾಡ್ತೀನಿ ಎನ್ನುವುದನ್ನು ನಟಿ ವಿದ್ಯಾ ಬಾಲನ್ ಸಾಬೀತು ಮಾಡಿದ್ದಾಳೆ. ಇದು ನಡೆದದ್ದು ವಿಶ್ವ ಮಹಿಳಾ ದಿನದಂದು. ಅಂದು ಈ ಡರ್ಟಿ ಸಿನಿಮಾ ಹೆಣ್ಣು ತನ್ನ ವೈಯುಕ್ತಿಕ ಬದುಕಿನ ಬಗ್ಗೆ ನೇರವಾಗಿ ಹೇಳಿ ಎಲ್ಲರನ್ನು ಮತ್ತೆ ತನ್ನ ಕಡೆ ತಿರುಗಿಸಿ ಕೊಂಡಿದ್ದಾಳೆ. ನನ್ನ ಪತಿ ಸಿದ್ಧಾರ್ಥ್ ಕಪೂರ್ ಬೆಡ್ ರೂಂ ಗಿಂತಲೂ ಬೋರ್ಡ್ ರೂಂ ನಲ್ಲಿ ಹೆಚ್ಚು ಬ್ಯುಸಿಯಾಗಿರ್ತಾರೆ ಎನ್ನುವ ಮಾತನ್ನು ಹೇಳಿದ್ದಾಳೆ ಈ ಸುಂದರಿ. ಒಂದು ಹಿಂದಿ ಚಾನೆಲ್ ನಲ್ಲ್ಲಿ ಪ್ರಸಾರವಾದ ಟಾಕ್ ಷೋ ನಲ್ಲಿ ಈಕೆಯ ಕೇಳಿದ ಎಲ್ಲರು ಆಶ್ಚರ್ಯ ಚಕಿತರಾಗಿದ್ದು ಸತ್ಯ.
ಈ ಟಾಕ್ ಷೋ ನಲ್ಲಿ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಸಹ ಭಾಗವಹಿಸಿದ್ದು ಅವರ ನಡುವೆ ನಡೆದ ಸಂಭಾಷಣೆಯು ಅಲ್ಲಿದ್ದ ಎಲ್ಲರನ್ನು ಮತ್ತು ಕಾರ್ಯಕ್ರಮ ವೀಕ್ಷಿಸುತ್ತಿದ್ದವರೆಲ್ಲರ ಗಮನ ಸೆಳೆದಿತ್ತು. ವಿಶ್ವ ಮಹಿಳಾ ದಿನದ ವಿಶೇಷ ಕಾರ್ಯಕ್ರಮದಲ್ಲಿ ಅವರಿಬ್ಬರೂ ಭಾಗವಹಿಸಿದ್ದರು. ಮಹಿಳಾ ಸಬಲೀಕರಣ ಇನ್ನು ಅನೇಕ ಸಂಗತಿಗಳನ್ನು ಮಾತನಾಡುವಾಗ ಏಕ್ತಾ ಬೆಡ್ ರೂಂ ನಲ್ಲಿ ಟೀವಿ ಇರ ಬಾರದು ಎನ್ನುವ ಮಾತು ಹೇಳಿದಾಗ ವಿದ್ಯಾಬಾಲನ್ ತಮ್ಮ ಪತಿಗೆ ಬೆಡ್ ರೂಮ್ಗಿಂತ ಬೋರ್ ರೂಂ ಹೆಚ್ಚು ಪ್ರಿಯ ಅನ್ನುವ ಮಾತನ್ನು ಹೇಳಿದ್ದಾಳೆ . ಅಂದ್ರೆ ಪಾಪ ವಿದ್ಯಾಬಾಲನ್ ಹ್ಯಾಪಿಯಾಗಿಲ್ವ ಅಂತ ಬಾಲಿವುಡ್ ಮಂದಿ ಪರಪರ ತಲೆ ಕೆರೆದು ಕೊಳ್ತಿದ್ದಾರೆ.. ! ಆಕೆ ಮಾತಿನಲ್ಲಿ ಏನಾದ್ರೂ ಗೂಢಾರ್ಥ ಇದೆಯೇನೋ ಅಂತ ಹುಡುಕುತ್ತಿದ್ದಾರಂತೆ..!