ನನ್ನ ತಮ್ಮ ಫೈಜಲ್ ಬಗ್ಗೆ ಹರಡಿರುವ ವದಂತಿಗಳು ಶುದ್ಧಸುಳ್ಳು-ಅಮೀರ್ ಖಾನ್ !
, ಶನಿವಾರ, 4 ಜನವರಿ 2014 (10:30 IST)
ಯಾರ ಮನೆಯ ದೋಸೆಯಲ್ಲಿ ತೂತು ಇರಲ್ಲ ಹೇಳಿ .. ಯಾರೆಷ್ಟೇ ಪರ್ಫೆಕ್ಟ್ ಅಂತ ಹೇಳಿದರು ಅವರಲ್ಲಿ ಹುಳುಕು ಇದ್ದೆ ಇರುತ್ತೆ ಅನ್ನುವ ಮಾತು ಈಗ ಬಾಲಿವುಡ್ ನ ಮಿ. ಪರ್ಫೆಕ್ಟ್ ಅಮೀರ್ ಖಾನ್ ಬಗ್ಗೆ ಬಿ ಟೌನ್ ನಲ್ಲಿನ ಮಂದಿ ಹೇಳುತ್ತಿರುವ ಮಾತುಗಳು. ಇದೇನು ಇದ್ದಕ್ಕಿದ್ದ ಹಾಗೆ ಹೀಗೆಲ್ಲ ಸುದ್ದಿ ಹರಡಿದೆ ಎನ್ನುವ ಆಶ್ಚರ್ಯ ಆಗುವುದು ಸಹಜ. ಆದರೆ ಒಂದು ವದಂತಿ ಪ್ರಕಾರ ಅಮೀರ್ ಖಾನ್ ಮಾನಸಿಕ ವ್ಯಾಧಿಯಿಂದ ಬಾಳುತ್ತಿರುವ ತಮ್ಮ ಸಹೋದರ ಫೈಜಲ್ ಖಾನ್ ಅವರನ್ನು ಮನೆಯಲ್ಲಿಯೇ ಬಂಧಿಸಿ ಅವರಿಗೆ ಬಲವಂತವಾಗಿ ಮಾತ್ರೆಗಳನ್ನು ನುಂಗಿಸುತ್ತಿದ್ದಾರೆ. ಆದರೆ ಆತನ ಆರೋಗ್ಯ ಸ್ಥಿರವಾಗಿದೆ. ಆದರು ಇವರು ಬಲವಂತವಾಗಿ ಮನೆಯೊಳಗೇ ಕೂಡಿ ಹಾಕಿದ್ದಾರೆ ಎನ್ನುವ ವದಂತಿಗೆ ತೀವ್ರವಾಗಿ ಖಂಡಿಸಿದ್ದಾರೆ ಅಮೀರ್ ಖಾನ್.
ಆದರೆ ತನ್ನ ತಮ್ಮ ಫೈಜಲ್ ಗೆ ಏನು ಆಗಿಲ್ಲ, ತನ್ನ ಹೊಸ ಸಿನಿಮಾ ಸ್ಕ್ರಿಪ್ಟ್ ಗಳಿಗೆ ಸಂಬಂಧಿಸಿದಂತೆ ಆತ ತನಗೆ ಸಹಾಯ ಮಾಡುತ್ತಿದ್ದಾನೆ. ಆತನ ಬಗ್ಗೆ ಹರಡಿರುವ ವದಂತಿಗಳು ಸುಳ್ಳು ಎಂದು ಸಹ ಹೇಳಿದ್ದಾರೆ ಅಮೀರ್ ಖಾನ್ . ಧೂಮ್ 3 ಸ್ಕ್ರಿಪ್ಟ್ ಆಯ್ಕೆಯಲ್ಲಿ ಫೈಜಲ್ ದೇ ಮುಖ್ಯ ಪಾತ್ರವಿದೆ ಎಂದೂ ಸಹ ಹೇಳಿದ್ದಾರೆ ಅಮೀರ್ ಖಾನ್ . ಫೈಜಲ್ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ತಾನು ಈ ಸಿನಿಮಾದಲ್ಲಿ ನಟಿಸಲು ಆದ್ಯತೆ ನೀಡಿದೆ ಎಂದೂ ಸಹ ಈ ಸಮಯದಲ್ಲಿ ಹೇಳಿದ್ದಾರೆ ಮಿ. ಪರ್ಫೆಕ್ಟ್ . ಧೂಮ್ 3 ಗೆಲುವು ನನ್ನಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ ಅಮೀರ್ ಖಾನ್ .