ನನಗೆ ಹೇಗೆ ಇಷ್ಟಾನೋ ಹಾಗೆ ನಾನಿರ್ತೀನಿ ಅಂದ ಪ್ರಿಯಾಂಕ!
, ಮಂಗಳವಾರ, 11 ಫೆಬ್ರವರಿ 2014 (09:39 IST)
ನನಗೆ ಹೇಗೆ ಇಷ್ಟ ಆಗುತ್ತದೆಯೋ ಹಾಗೆ ಇರ್ತೀನಿ. ನನ್ನ ಮನಕ್ಕೆ ಬಂದಂತೆ ಬದುಕುವ ಶೈಲಿ ನನ್ನದು ಹಾಗೆ ಇರ ಬೇಕು , ಹೀಗೆ ನಡೆಯ ಬೇಕು ಎನ್ನುವ ಯಾವ ನಿಯಮ ನಿಬಂಧನೆಗಳು ನನ್ನ ಬದುಕಲ್ಲಿ ಇಲ್ಲ. ಎನ್ನುವ ಮಾತನ್ನು ಬಾಲಿವುಡ್ ಹಾಟ್ ಹಾಟ್ ಬೆಡಗಿ ಪ್ರಿಯಾಂಕ ಚೋಪ್ರ ಹೇಳಿದ್ದಾರೆ. ಆಕೆಯ ಹೊಸ ಚಿತ್ರ ಗುಂಡೇ ಯಾ ಪ್ರೊಮೊಶಂಗೆ ಸಂಬಂಧ ಪಟ್ಟಂತೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಈಕೆ ನೇರವಾಗಿ ತನಗೆ ಅನ್ನಿಸಿದ್ದಾನ್ನು ಜಗತ್ತಿನ ಮುಂದೆ ಇಡುತ್ತಾರೆ . ಈಗ ಮೇರಿ ಕಾಂ ಚಿತ್ರದಲ್ಲಿ ನಟಿಸುತ್ತಿರುವ ಈ ಚೆಲುವೆಗೆ ಭಿನ್ನ ಬಗೆಯ ಪಾತ್ರಗಳಲ್ಲಿ ನಟಿಸುವುದಕ್ಕೆ ಹೆಚ್ಚು ಆಸಕ್ತಿ ಅಂತೆ. ಹಾಗೆಂದು ಖುದ್ದು ಆಕೆ ಹೇಳಿದ್ದಾರೆ. ಒಂದೇ ಬಗೆಯ ಪಾತ್ರಗಳಲ್ಲಿ ನಟಿಸುವುದೆಂದರೆ ನನಗೆ ಇಷ್ಟವೇ ಆಗುವುದಿಲ್ಲ. ಆದಷ್ಟು ಚೂಸಿಯಾಗಿರ್ತೀನಿ , ಪಾತ್ರಗಳ ಆಯ್ಕೆಯಲ್ಲಿ. ಆದ್ದರಿಂದ ನಾನು ಮಾಡುವ ಪಾತ್ರಗಳು ತುಂಬಾ ಭಿನ್ನವಾಗಿರುತ್ತದೆ. ಅಗ್ನಿಪಥ್, ಬರ್ಫಿ ಈಗ ಗುಂಡೇ ಚಿತ್ರಗಳ ಪಾತ್ರಗಳು ನನಗೆ ಎಂತಹ ಮನಸ್ಥಿತಿ ಇದೆ ಎನ್ನುವುದನ್ನು ತೋರುತ್ತದೆ ಎಂದಿದ್ದಾರೆ. ಆಕೆಗೆ ಹೆಚ್ಚು ಕಷ್ಟ ಪಟ್ಟು ಮಾಡುವ ಪಾತ್ರಗಳ ಬಗ್ಗೆ ವಿಶೇಷವಾದ ಒಲವಿದೆ. ವಿಭಿನ್ನತೆಯೆ ನನ್ನ ಜೀವಾಳ. ನಾನು ಯಾರನ್ನು ಅನುಕರಿಸುವುದಿಲ್ಲ ಎನ್ನುತ್ತಾರೆ ಪ್ರಿಯಾಂಕ. ಕಳೆದ ವರ್ಷ ನಾನು ನಟಿಸಿದ ಕ್ರಿಶ್ 3 ಇನ್ನೂರು ಕೋಟಿ ರೂಪಾಯಿಗಳ ಗಳಿಕೆ ಮಾಡಿತು. ಅದಕ್ಕೂ ಮುನ್ನ ಬರ್ಫಿ, ಅಗ್ನಿಪಥ್ ನಲ್ಲಿ ನಟಿಸಿದ್ದೇನೆ ಎಲ್ಲವು ನನಗೆ ಉತ್ತಮ ಹೆಸರು ನೀಡಿತ್ತು. ಏಕ್ಸಾಟಿಕ್ ಸಿನಿಮಾ ಭಾರತದಲ್ಲಿ ಪ್ಲಾಟಿನಮ್ ಸಾಧಿಸಿದೆ. ನನ್ನ ಕೆರಿಯರ್ ಫಾಂ ನಲ್ಲಿ ಇದೆ. ಇನ್ನು ಹೆಚ್ಚಿಸಿಕೊಳ್ಳುವೆ ಎಂದಿರುವ ಪ್ರಿಯಾಂಕ ಅವರ ಗುಂಡೇ ಚಿತ್ರ ಈ ತಿಂಗಳು ಹದಿನಾಲ್ಕನೇ ತಾರೀಖಿನಂದು ಬಿಡುಗಡೆ ಆಗಲಿದೆ. ಯಶ್ ಚೋಪ್ರ ಫಿಲಿಮ್ಸ್ ಗುಂಡೆಯಲ್ಲಿ ಈಕೆ ಕ್ಯಾಬರೆ ನರ್ತಕಿ ಪಾತ್ರವನ್ನು ಮಾಡಿದ್ದಾರೆ. ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಈಕೆಯ ಜೊತೆ ಆಗಿದ್ದಾರೆ.