Article Bollywood Gossips %e0%b2%a8%e0%b2%a8%e0%b2%97%e0%b3%86 %e0%b2%b8%e0%b3%8b%e0%b2%b2%e0%b2%bf%e0%b2%a8 %e0%b2%ad%e0%b2%af%e0%b2%b5%e0%b2%bf%e0%b2%b2%e0%b3%8d%e0%b2%b2 %e0%b2%ae%e0%b2%be%e0%b2%a7%e0%b3%81%e0%b2%b0%e0%b2%bf 107121400012_1.htm

Daily Horoscope

Select Your Language

Notifications

webdunia
webdunia
webdunia
webdunia

ನನಗೆ ಸೋಲಿನ ಭಯವಿಲ್ಲ:ಮಾಧುರಿ

ನನಗೆ ಸೋಲಿನ ಭಯವಿಲ್ಲ:ಮಾಧುರಿ
IFM
ಆಜ್ ನಾಚ್ಲೇ ಮೇಲಿನ ಪ್ರೇಕ್ಷಕರ ನಿರಂತರ ಟೀಕೆಯ ನಂತರವೂ ಸ್ವಲ್ಪವೂ ವಿಚಲಿತಗೊಳ್ಳದ ಮಾಧುರಿ ದೀಕ್ಷಿತ್, ಚಿತ್ರಗಳ ಬಾಕ್ಸ್ ಆಫೀಸ್ ಪ್ರದರ್ಶನದ ಬಗ್ಗೆ ತಾನು ಚಿಂತಿತರಾಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ನನಗೆ ಸೋಲುವ ಭಯವಿಲ್ಲ. ನನ್ನ ಚಿತ್ರಗಳನ್ನು ನಾನು ವಿಶಿಷ್ಟವಾಗಿ ನಿರ್ವಹಿಸಿದ್ದೇನೆ ಎಂಬುದೇ ನನಗೆ ಸಂತೋಷದ ವಿಷಯವಾಗಿದೆ. ಈ ಚಿತ್ರದಲ್ಲಿ ಯಾವುದೇ ''ಹೀರೋ' ಇಲ್ಲ ನನ್ನನ್ನೇ ಚಿತ್ರದ ನಾಯಕಿ ಎಂದು ನಾನು ಕರೆಯಿಸಿಕೊಳ್ಳುವುದಿಲ್ಲ ಎಂದು ಮಾಧುರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಎರಡು ಚಿಕ್ಕ ಮಕ್ಕಳ ಪಾಲನೆ ಪೋಷಣೆಯ ನಡುವೆ ನೃತ್ಯವನ್ನು ಮುಂದುವರಿಸುವುದು ನನಗೆ ಕಷ್ಟವಾಗಿತ್ತು. ಆದುದರಿಂದ ದೇವದಾಸ್ ಚಿತ್ರದ ನಂತರ ನಾನು ಯೂವುದೇ ನೃತ್ಯವನ್ನು ಮಾಡಿರಲೇ ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ನಾನು ಅನೇಕ ಉತ್ಕೃಷ್ಟ ನೃತ್ಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ಆದಿತ್ಯ ಛೋಪ್ರಾ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಜನರು ಈಗಲೂ ನನ್ನನ್ನು ನೋಡಬಯಸುತ್ತಾರ ಎಂಬುದರ ಬಗ್ಗೆ ಕಳವಳಗೊಂಡಿದ್ದೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದಾಗಿ ಅವರು ನನಗೆ ಭರವಸೆ ನೀಡಿದ್ದರು. ಇದೇ ನನ್ನ ಉತ್ಸಾಹಕ್ಕೆ ಕಾರಣ ಎಂದು ಮಾಧುರಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ

Share this Story:

Follow Webdunia kannada