ರಾಗಿಣಿ ಎಮೆಮೆಸ್2 ಚಿತ್ರವೂ ನಿರೀಕ್ಷಿಸದೆ ಇದ್ದುದಕ್ಕಿಂತ ಹೆಚ್ಚಿನ ಗಳಿಕೆ ಕಂಡಿದೆ. ಇದು ಬಾಕ್ಸಾಫೀಸಲ್ಲಿ ಅತಿ ಹೆಚ್ಚಿನ ಯಶಸ್ಸು ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಸನ್ನಿ ಲಿಯೋನ್ ಗೆ ಸಿಕ್ಕಾಪಟ್ಟೆ ಖುಷಿ ಆಗಿದೆ.
ಈ ಕುರಿತು ಮಾತನಾಡುತ್ತಾ, ನಾನು ಇದನ್ನು ನಿರೀಕ್ಷಿಸಿರಲಿಲ್ಲ, ನನ್ನನ್ನು ಪ್ರೇಕ್ಷಕರು ಇಷ್ಟೊಂದು ಪ್ರೀತಿಯಾಗಿ ಸ್ವೀಕರಿಸುತ್ತಾರೆ ಎಂದು ತಿಳಿದೇ ಇರ್ಲಿಲ್ಲ ಎಂದು ಹೇಳಿದ್ದಾಳೆ. ಈ ಚಿತ್ರ ಕಳೆದ ತಿಂಗಳು 21ರಂದು ಬಿಡುಗಡೆ ಆಗಿತ್ತು. ಅದರ ಬಿಡುಗಡೆ ಆಗಿ ಎರಡು ವಾರದಲ್ಲಿ 45.88 ಕೋಟಿಗಳಷ್ಟು ಗಳಿಕೆ ಮಾಡಿತ್ತು.
ಬಿಗ್ ಬಾಸ್ ರಿಯಾಲಿಟಿ ಷೋ ಮುಖಾಂತರ ಭಾರತಕ್ಕೆ ಬಂದ ಈ ಮಾದಕ ಚೆಲುವೆ ಆ ಬಳಿಕ ಮಹೇಶ್ ಭಟ್ ಅವರ ನಿರ್ಮಾಣದ ಪೂಜಾ ಭಟ್ ನಿರ್ದೇಶನದ ಜಿಸ್ಮ್2 ರಲ್ಲಿ ತನ್ನದೇಹಸಿರಿಯನ್ನು ತೋರಿಸಿದ್ದರು ಸಹಿತ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ.
ಆದರೆ ತಾನು ನಟನೆಯ ಮೂಲಕವೂ ಸಹ ಎಲ್ಲರನ್ನು ಗೆಲ್ಲಬಲ್ಲೆ ಎಂದು ಸಾಬೀತು ಮಾಡಿದ್ದಾಳೆ ಈ ಚೆಲುವೆ. ಈವರೆಗೂ ವಯಸ್ಕರ ಚಿತ್ರಗಲ್ಲಿ ನಟಿಸುತ್ತಿದ್ದ ಸನ್ನಿ ನಂತರ ಅದನ್ನು ಮಾಡುವುದಿಲ್ಲ ಎಂದು ಹೇಳಿದ್ದು ಸಹಿತ ಹಳೆಯ ಕಥೆ ರಾಗಿಣಿ ಎಮೆಮೆಸ್ 2 ನಿರ್ಮಾಪಕಿ ಏಕ್ತಾ ಕಪೂರ್ ಸನ್ನಿಯ ಕಲ ಬದುಕಿಗೊಂದು ಅರ್ಥ ನೀಡಿದ್ದಾರೆ!