Select Your Language

Notifications

webdunia
webdunia
webdunia
webdunia

ನನಗೆ ರಣಬೀರ್ ಅಂದ್ರೆ ಇಷ್ಟ ಮದುವೆ ಆಗಲು ನಾನು ರೆಡಿ ಎಂದ ಅಲಿಯ ಭಟ್

ರಣಬೀರ್ ಕಪೂರ್
, ಸೋಮವಾರ, 7 ಏಪ್ರಿಲ್ 2014 (15:44 IST)
PR
ಬಾಲಿವುಡ್ ನಟ ರಣಬೀರ್ ಅಂದರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಆತನ ಬಗ್ಗೆ ವಿಶೇಷ ಆಸ್ಥೆ ನನಗೆ. ಆತ ಒಪ್ಪಿದರೆ ಮದುವೆ ಆಗಲು ತಾನು ಸಿದ್ಧ ಎನ್ನುವ ಮಾತನ್ನು ನಟಿ ಅಲಿಯ ಭಟ್ ಹೇಳಿದ್ದಾಳೆ. ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ವರ್ಲ್ಡ್ ವಾಹಿನಿಯ ಪ್ರೆಸೆಂಟರ್ ಕರಣ್ ಜೋಹರ್ ಅವರ ಪ್ರಸಿದ್ಧ ಕಾರ್ಯಕ್ರಮ ಕಾಫಿ ವಿತ್ ಕರಣ್ ನಲ್ಲಿ ತನ್ನ ಮನದ ಮಾತನ್ನು ಆಕೆ ಜಗತ್ತಿಗೆ ತಿಳಿಸಿದ್ದಾಳೆ.

ಸಿಕ್ಕ ಅವಕಾಶವನ್ನು ಆಕೆ ಸಂಪೂರ್ಣವಾಗಿ ಬಳಸಿಕೊಂಡು ತನ್ನ ಮನಸ್ಸಿನ ಆಸೆಯನ್ನು ಜಗತ್ತಿಗೆ ತಿಳಿಸಿದ್ದಾಳೆ. ರಾಕ್ಸ್ಟಾರ್ ಚಿತ್ರದಲ್ಲಿ ತಾನು ಮೊದಲ ಬಾರಿ ನಟಿಸುವಾಗ ಆತನ ಜೊತೆ ಸಮಯ ಕಳೆದದ್ದೆ ಗೊತ್ತಾಗಲಿಲ್ಲ. ಆ ಬಳಿಕ ರಣಬೀರ್ ಬಗ್ಗೆ ನನಗೆ ಸಿಕ್ಕಾಪಟ್ಟೆ ಅಭಿಮಾನ ಉಂಟಾಯಿತು ಎಂಬಂತಹ ಮಾತನ್ನು ಹೇಳಿದ್ದಾಳೆ ಆ ಚೆಲುವೆ.

ಕೇವಲ ಸಿನಿಮಾದಲ್ಲಿ ನಟಿಸುವಾಗ ಅಲ್ಲದೆ ಹೊರ ಬದುಕಲ್ಲೂ ಸಹಿತ ಆತನ ವರ್ತನೆ ತುಂಬಾ ಭಿನ್ನವಾಗಿರುತ್ತದೆ. ರಣಬೀರ್ ಇರುವ ರೀತಿ ತನ್ನನ್ನು ಹೆಚ್ಚು ಆಕರ್ಷಿಸಿದೆ. ಆಟ ಸಮ್ಮತಿಸಿದರೆ ರೋಮಾನ್ಸ್ ಗೆ ಸಿದ್ಧ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.
webdunia
PR

ಈ ಸಮಯದಲ್ಲಿ ಆಕೆಯು ನಟ ರಣಬೀರ್ ಕಪೂರ್ ಜೊತೆ ಅಫೇರ್ ಹೊಂದಿರುವ ಬಗ್ಗೆ ಕೇಳಿದಾಗ ತನಗೆ ಆತನ ಬಗ್ಗೆ ಅಂತಹ ಯಾವುದೇ ಭಾವನೆಗಳು ಇಲ್ಲ ಎಂದು ಹೇಳಿದ್ದಾಳೆ. ಹೌದಾ ಅಲಿಯಾ ?

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada