ನನಗೆ ಟ್ಯಾಟೂ ಹಾಕಿಸಿ ಕೊಳ್ಳುವುದಕ್ಕಿಂತ, ಹಾಕಿಸಿಕೊಂಡವರನ್ನು ನೋಡಲಿಷ್ಟ ಅಂದಳೀ ಸನ್ನಿ
, ಶುಕ್ರವಾರ, 31 ಜನವರಿ 2014 (15:18 IST)
ಬಾಲಿವುಡ್ ನಟಿ ಹಾಲಿವುಡ್ ಸೆಕ್ಸ್ ತಾರೆ ಸನ್ನಿಲಿಯೊನ್ ಆರಂಭದಲ್ಲಿ ಪೋರ್ನ್ ಚಿತ್ರಗಳ ರಾಣಿ ಆಗಿದ್ದರು, ಅದ್ಯಾಕೋ ಭಾರತದ ಮಣ್ಣು ಸ್ಪರ್ಶಿದ ಮೇಲೆ ಆಕೆಯ ದಿಕ್ಕೇ ಬದಲಾಗಿ ಹೋಯಿತು. ತನ್ನ ಗಮನ ಇಂತಹ ಪಾತ್ರಗಳ ಕಡೆಗೆ ನೆಡದೆ ತಾನು ಒಳ್ಳೆಯ ನಟಿಯಾಗುವತ್ತ ಆದ್ಯತೆ ನೀಡಿದ್ದು ಈಗ ಹಳೆಯ ಸಂಗತಿ. ಇತ್ತೀಚಿಗೆ ಸನ್ನಿ ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಂ ಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ಬಂದಿದ್ದಳು. ಅಲ್ಲಿ ಆಕೆಯ ಸಹ ನಟ ಸಚಿನ್ ಜೋಷಿ ತೆಲುಗು ಟೀಮ್ ಪ್ರತಿಸಿಧಿಸಿದ್ದರು. .
ಈ ಸಮಯದಲ್ಲಿ ಮಾಧ್ಯಮಿಗಳ ಜೊತೆ ಮಾತಾಡುತ್ತಿರುವಾಗ ನಿಮಗೆ ಹಚ್ಚೆ ಹಾಕಿಸಿಕೊಳ್ಳಲು ಇಷ್ಟ ಇಲ್ಲವೇ ಎನ್ನುವ ಪ್ರಶ್ನೆ ತೂರಲಾಯಿತು. ಆಗ ಆಕೆ ಇಲ್ಲ ನನಗೆ ಟ್ಯಾಟೂ ಹಾಕಿಸಿಕೊಳ್ಳು ವುದಕ್ಕಿಂತ, ಹಾಕಿಸಿಕೊಂಡವರನ್ನು ನೋಡಲು ಇಷ್ಟ ಎನ್ನುವ ಸಂಗತಿಯನ್ನು ಹೇಳಿದ್ದಾಳೆ. ಪ್ರಸ್ತುತ ಈ ಚೆಲುವೆ ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ .