ನನಗೂ ಶಾಹಿದ್ ಗೂ ಯಾವುದೇ ರೀತಿಯ ಸಂಬಂಧ ಇಲ್ಲ - ಸೋನಾಕ್ಷಿ ಸಿನ್ಹ
, ಶುಕ್ರವಾರ, 4 ಏಪ್ರಿಲ್ 2014 (09:19 IST)
ಸಿನಿಮಾ ನಟ ನಟಿಯರ ಬಗ್ಗೆ ಸದಾ ಗಾಸಿಪ್ ಹರಡುವ ಮಂದಿ ಅವರ ಸ್ನೇಹವನ್ನು ಬೇರೆಯ ರೀತಿಯಲ್ಲಿಯೆ ಅರ್ಥೈಸಿ ಕೊಳ್ತಾರೆ. ಅದೇ ರೀತಿ ಆಗಿದೆ ದಬಾಂಗ್ ಚೆಲುವೆ ಸೋನಾಕ್ಷಿ ಸಿನ್ಹ ಗೂ ಸಹಿತ. ಆಕೆ ರ. ರಾಜ್ಕುಮಾರ್ ಚಿತ್ರದಲ್ಲಿ ಶಾಹಿದ್ ಕಪೂರ್ ಜೊತೆ ನಟಿಸಿದ್ದಳು. ಈ ಬಗ್ಗೆ ಬಾಲಿವುಡ್ ನಲ್ಲಿ ಇಲ್ಲಸಲ್ಲದ ಸಂಗತಿಗಳು ಹರಡಿದ್ದವು. ಆದರೆ ಅಂತಹ ಯಾವುದೇ ಸಂಗತಿಗಳು ಆಗಿಲ್ಲ, ನನಗೆ ಶಾಹಿದ್ ಜೊತೆ ಅಫೇರ್ ಇಲ್ಲ ಎನ್ನುವ ಅಂಶವನ್ನು ಸೋನಾಕ್ಷಿ ಸ್ಪಷ್ಟ ಪಡಿಸಿ, ಈ ರೀತಿ ರೂಮರ್ ಹರಡುತ್ತಿರುವುದನ್ನು ಕೇಳಿದಾಗ ಮನಕ್ಕೆ ಹೆಚ್ಚು ಬೇಸರ ಆಗುತ್ತದೆ ಎಂದು ಸಹಿತ ಹೇಳಿದ್ದಾರೆ.
ಇಂತಹ ಸುಳ್ಳು ಸುದ್ದಿಗಳ ಕಾರಣದಿಂದ ಪಾರ್ಟಿಗೆ ಹೋಗಲು, ಹೊರಗೆ ಓಡಾಡಲು ಹೆದರಿಕೆ ಆಗುತ್ತಿದೆ ಎಂದಿದ್ದಾರೆ ಸೋನಾಕ್ಷಿ. ಶಾಹಿದ್ ಜೊತೆ ಆ ಚಿತ್ರದಲ್ಲಿ ನಟಿಸಿದ ಬಳಿಕ ಮಾತಾಡಿಲ್ಲ, ಮೀಟ್ ಮಾಡಿಲ್ಲ. ಆದರೂ ಸಹಿತ ಯಾಕೆ ಇಷ್ಟೆಲ್ಲಾ ಕಟ್ಟು ಕಥೆಗಳು ಪ್ರಸಾರ ಆಗುತ್ತಿವೆಯೋ ತಿಳಿದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ನೊಂದ ಸೋನಾಕ್ಷಿ. ... ಪೂರ್ ಗರ್ಲ್ !