ನನಗೂ ಅಲಿಯಾಗೂ ಲವ್ವಾ ? ನೋ ನೋ ಅಂದ ಬೋನಿಪುತ್ರ ಅರ್ಜುನ್ !
, ಶುಕ್ರವಾರ, 17 ಜನವರಿ 2014 (11:41 IST)
ನನ್ನ ಗಮನ ಏನಿದ್ದರು ನನ್ನ ಮುಂದಿರುವ ಕೆರಿಯರ್ ಬಗ್ಗೆ. ನಾನು ಯಾರೊಂದಿಗೂ ಅಫೇರ್ ಹೊಂದಿಲ್ಲ ಎಂದು ನೇರವಾಗಿ ಹೇಳಿದ್ದಾರೆ ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ . ತಮ್ಮ ಮತ್ತು ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಅಲಿಯಾ ಭಟ್ ನಡುವೆ ಲವಿಡವಿ ಇದೆ ಎನ್ನುವ ಸಂಗತಿ ಹರಡಿರುವ ಬಗ್ಗೆ ಹೇಳುತ್ತಾ ಅದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ. ಕೆರಿಯರ್ ಒಂದೇ ನನ್ನ ಕಣ್ಣಿಗೆ ಕಾಣುತ್ತಿರುವುದು. ನಾನು ಒಂಟಿ, ಜಂಟಿ ಅಲ್ಲ , ನಾನು ಯಶಸ್ವಿ ಆದ ಬಳಿಕ ಬೇರೆ ಕಡೆಗೆ ಗಮನ ನೀಡಲು ಸಾಧ್ಯ , ಸಧ್ಯಕ್ಕೆ ನಾನು ಹೆಚ್ಚು ಆದ್ಯತೆ ನೀಡುವುದು ಭವಿಷ್ಯದ ಬಗ್ಗೆ ಎಂದು ನೇರವಾಗಿ ಹೇಳಿದ್ದಾರೆ ಅರ್ಜುನ್. ಯಶ್ ರಾಜ್ ಫಿಲಿಮ್ಸ್ ನಿರ್ಮಾಣದ ಗೂಂಡೆ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಪ್ರಿಯಾಂಕ್ ಚೋಪ್ರ ಅವರ ಜೊತೆಯಲ್ಲಿ ಅರ್ಜುನ್ ನಟಿಸಿದ್ದಾರೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಈ ಚಿತ್ರ ಫೆಬ್ರವರಿ 14 ರಂದು ಬಿಡುಗಡೆ ಆಗುತ್ತಿದೆ. 2 ಸ್ಟೇಟ್ಸ್ ಚಿತ್ರದಲ್ಲಿ ಅವರು ಅಲಿಯಾ ಭಟ್ ಜೊತೆ ನಟಿಸುತ್ತಿದ್ದಾರೆ . ಇದು ಚೇತನ್ ಭಗತ್ ಅವರ ಕಥೆ ಸ್ಟೋರಿ ಆಫ್ ಮೈ ಮ್ಯಾರೇಜ್ ಕಥೆಯನ್ನು ಆಧರಿಸಿದೆ.