ನಟಿ ಪ್ರಿಯಾಮಣಿ ಹುಲಿಯ ಜೊತೆಯಲ್ಲಿ ಸರಸ
, ಶುಕ್ರವಾರ, 3 ಜನವರಿ 2014 (17:31 IST)
ನಟಿ ಪ್ರಿಯಾಮಣಿ ಹೊಸ ವರ್ಷದಲ್ಲಿ ಹೊಸ ಸಾಹಸ ಮಾಡುತ್ತಿದ್ದಾಳೆಂದು ಭಾವಿಸಬೇಡಿ. ನಟಿ ಬ್ಯಾಂಕಾಕ್‌ಗೆ ತೆರಳಿದ್ದು, ಶುಕ್ರವಾರವೇ ವಾಪಸಾಗಲಿದ್ದಾರೆ. ಅಲ್ಲಿನ ಟೈಗರ್ ಟೆಂಪಲ್‌ಗೆ ಪ್ರಿಯಮಣಿ ಭೇಟಿ ನೀಡಿ ಪುಳಕಿತಳಾಗಿದ್ದಾಳೆ. ಆನ್‌ಲೈನ್‌ನಲ್ಲಿ ತಾನು ಹುಲಿಯ ಜೊತೆಗಿರುವ ಚಿತ್ರಗಳನ್ನು ಕೂಡ ಪೋಸ್ಟ್ ಮಾಡಿದ್ದಾಳೆ. ಪ್ರಿಯಾಮಣಿಗೆ ಪ್ರಾಣಿಗಳು ಎಂದರೆ ತುಂಬಾ ಅಕ್ಕರೆ. ವಿಶೇಷವಾಗಿ ನಾಯಿಗಳು ಮತ್ತು ಬೆಕ್ಕುಗಳು. ಸಿಂಹದ ಜತೆ ಮುಕ್ತವಾಗಿ ಬೆರೆಯುವ ಜನರನ್ನು ನಾವು ನೋಡಿದ್ದೇವೆ.ಪ್ರಿಯಾಗೆ ಕೂಡ ಹಾಗೆ ಮಾಡಬೇಕೆಂದು ಇಷ್ಟವಿತ್ತು. ಅವಳದ್ದು ಸಾಹಸೀ ಮನಭಾವವಾಗಿದ್ದು,ಟೈಗರ್ ಟೆಂಪಲ್ ಒಂದೊಂದು ಕ್ಷಣವನ್ನೂ ಆನಂದಿಸಿದ್ದಾಳೆ ಎಂದು ಪ್ರಿಯಾ ತಾಯಿ ಲತಾ ಹೇಳಿದ್ದಾರೆ.