Article Bollywood Gossips %e0%b2%a8%e0%b2%9f%e0%b2%b0%e0%b2%bf%e0%b2%97%e0%b2%bf%e0%b2%82%e0%b2%a4 %e0%b2%a8%e0%b2%9f%e0%b2%bf%e0%b2%af%e0%b2%b0%e0%b3%81 %e0%b2%9c%e0%b2%be%e0%b2%a3%e0%b3%86%e0%b2%af%e0%b2%b0%e0%b3%81 %e0%b2%b8%e0%b3%8b%e0%b2%b9%e0%b2%be 108102900035_1.htm

Daily Horoscope

Select Your Language

Notifications

webdunia
webdunia
webdunia
webdunia

ನಟರಿಗಿಂತ ನಟಿಯರು ಜಾಣೆಯರು: ಸೋಹಾ

ಸೋಹಾ ಆಲಿ ಖಾನ್
"ನನ್ನ ಪ್ರಕಾರ ನಟರಿಗಿಂತ ನಟಿಯರು ಹೆಚ್ಚು ಜಾಣೆಯರಾಗಿರುತ್ತಾರೆ. ನಟಿಯರು ಜಾಣೆಯರಲ್ಲ ಅಥವಾ ಬುದ್ಧಿವಂತರಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನಾನು ಹೇಳುವಂತೆ ಅವರು ಭಾವನೆಗಳ ವಿಚಾರದಲ್ಲಿ ಹೆಚ್ಚು ಆಳವಾಗಿರುತ್ತಾರೆ"

ಇದು ಬಾಲಿವುಡ್ ನಟಿ ಸೋಹಾ ಆಲಿ ಖಾನ್ ಹೇಳಿರುವ ಮಾತು.

"ನಮ್ಮ ದೇಶದ ನಟಿಯರು ತುಂಬಾ ಬುದ್ಧಿವಂತರು ಹಾಗೂ ತಮ್ಮ ವೃತ್ತಿಯನ್ನು ನಿಭಾಯಿಸಲು ಸಮರ್ಥರು ಮತ್ತು ಚಾಣಾಕ್ಷರಾಗಿದ್ದಾರೆ" ಎಂದೂ ಆಕೆ ಹೇಳಿದ್ದಾರೆ. ಮತ್ತೂ ಮಾತು ಮುಂದುವರಿಸಿರುವ ಸೋಹಾ, "ಮಾಧ್ಯಮಗಳು, ಗ್ಲಾಮರ್, ಪ್ರಯಾಣ, ಖಾಸಗಿ ಮತ್ತು ಸಾರ್ವಜನಿಕ ಜೀವನವನ್ನು ನಿಭಾಯಿಸುವುದು - ಹೀಗೆ ಅನೇಕ ವಿಚಾರಗಳ ನಿರ್ವಹಣೆ ಕಷ್ಟಕರ ಮತ್ತು ಇಲ್ಲಿ ವ್ಯಾಪಾರೀ ದೃಷ್ಟಿಯಿರುತ್ತದೆ. ಈಗ ಸಿನಿಮಾ ಕೇವಲ ಕಲೆಯಾಗಿ ಉಳಿದಿಲ್ಲ. ಇಲ್ಲಿ ಸ್ಥಾನಮಾನ ಗಿಟ್ಟಿಸುವುದು, ಉಳಿಸಿಕೊಳ್ಳುವುದು, ನಟಿಸಿದ ಚಿತ್ರಗಳು ಹೇಗೆ ಓಡುತ್ತಿವೆ ಮತ್ತು ಚಿತ್ರಗಳ ಆಯ್ಕೆ ಕೂಡಾ ಕೂಡಾ ಮುಖ್ಯವಾಗಿರುತ್ತದೆ" ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಒಂದು ವೇಳೆ ಸತತ ತಪ್ಪುಗಳನ್ನು ಮಾಡಿದರೆ ನಷ್ಟ ನಮಗಾಗುತ್ತದೆ. ನಮ್ಮ ಕೆಲಸಗಳನ್ನು ಮಾಡಲು ಸಾಕಷ್ಟು ಜನ ಸಾಲಾಗಿ ಸಿದ್ಧರಾಗಿರುತ್ತಾರೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ನಮ್ಮ ಜಾಗಕ್ಕೆ ಇತರರು ಬಂದಿರುತ್ತಾರೆ. ನನ್ನ ಪ್ರಕಾರ ಅಪಾರ ಬುದ್ಧಿವಂತಿಕೆಯ ಅಗತ್ಯ ನಟಿಗಿರಬೇಕಾಗುತ್ತದೆ" ಎನ್ನುವುದು ಸೋಹಾ ಅಭಿಮತ.

ಸೋಹಾ ಆಲಿಖಾನ್ ಯಾರೆಂದು ನಿಮಗೆ ಖಂಡಿತಾ ಗೊತ್ತು. ಆದರೂ ಮಾಹಿತಿಗೆಂದು ಇರಲಿ, ಓದಿಕೊಳ್ಳಿ.

ಕ್ರಿಕೆಟಿಗ ಮನ್ಸೂರ್ ಆಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಠಾಗೋರ್ ಮಗಳು ಹಾಗೂ ಸೈಫ್ ಆಲಿ ಖಾನ್ ಸಹೋದರಿ ಸೋಹಾ ಆಲಿಖಾನ್. ಹುಟ್ಟಿದ್ದು ದೆಹಲಿಯಲ್ಲಿ. ಈಗ 30 ವರ್ಷ ತುಂಬಿದೆ ಆಕೆಗೆ. ಇನ್ನೂ ಮದುವೆಯಾಗಿಲ್ಲ. ತೆಲುಗಿನ ಖ್ಯಾತ ನಟ ಸಿದ್ಧಾರ್ಥ್ ಜತೆ ಡೇಟಿಂಗ್ ಮಾಡ್ತಿದ್ದಾರಂತೆ. ಆಕ್ಸ್‌ಪರ್ಡ್‌ ಗ್ರಾಜುವೇಟ್‌. ಹೆಚ್ಚು ವಿದ್ಯಾವಂತೆ, ತಿಳಿದುಕೊಂಡಿರುವಾಕೆ. ಕಾರ್ಪೋರೇಟ್ ಪ್ರಪಂಚದಲ್ಲಿ ಸಾಕಷ್ಟು ಓಡಾಡಿ ಪರಿಚಯವಿದ್ದು, ಬಿಸಿನೆಸ್ ಕುರಿತೂ ಬಲ್ಲವಳಾಗಿದ್ದಾಳೆ. ಬಾಲಿವುಡ್‌ಗೆ ಮೊದಲ ಎಂಟ್ರಿ ಶಾಹಿದ್ ಕಪೂರ್‌ ನಾಯಕನಾಗಿದ್ದ 'ದಿಲ್ ಮಾಂಗೇ ಮೋರ್' ಮೂಲಕ. ನಂತರ ಅಂತರ್ ಮಹಲ್, ಪ್ಯಾರ್ ಮೇ ಟ್ವಿಸ್ಟ್, ಶಾದಿ ನಂ.1, ರಂಗ್ ದೇ ಬಸಂತಿ, ಅಹಿಸ್ತಾ ಆಹಿಸ್ತಾ, ಖೋಯಾ ಖೋಯಾ ಚಾಂದ್, ಮುಂಬೈ ಮೇರಿ ಜಾನ್ ಮುಂತಾದ ಚಿತ್ರಗಳಲ್ಲಿ ಆಕೆ ನಟಿಸಿದ್ದು, ಬಿಡುಗಡೆಯಾಗಿವೆ. ದಿಲ್ ಕಬಡ್ಡಿ, ಧೂಂಡ್ತೇ ರೆಹ್ ಜಾವೋಂಗೇ, ಮುಂಬೈ ಕಟ್ಟಿಂಗ್, 99, ತೇರಾ ಕ್ಯಾ ಹೋಗಾ ಜಾನಿ?, ಚೌರಾಹೆನ್ ಕ್ರಾಸ್‌ರೋಡ್ಸ್ ಮುಂತಾದ ಚಿತ್ರಗಳು ಬಿಡುಗಡೆಗೆ ಕಾದಿವೆ.


Share this Story:

Follow Webdunia kannada