Article Bollywood Gossips %e0%b2%a8%e0%b2%9f%e0%b2%a8%e0%b3%86 %e0%b2%a8%e0%b2%bf%e0%b2%9c%e0%b2%95%e0%b3%8d%e0%b2%95%e0%b3%82 %e0%b2%86%e0%b2%a8%e0%b2%82%e0%b2%a6%e0%b2%a6%e0%b2%be%e0%b2%af%e0%b2%95 %e0%b2%ab%e0%b2%b0%e0%b2%be%e0%b2%a8%e0%b3%8d %e0%b2%85%e0%b2%96%e0%b3%8d%e0%b2%a4%e0%b2%b0%e0%b3%8d 108070800046_1.htm

Daily Horoscope

Select Your Language

Notifications

webdunia
webdunia
webdunia
webdunia

ನಟನೆ ನಿಜಕ್ಕೂ ಆನಂದದಾಯಕ: ಫರಾನ್ ಅಖ್ತರ್

ನಟನೆ ನಿಜಕ್ಕೂ ಆನಂದದಾಯಕ: ಫರಾನ್ ಅಖ್ತರ್
ನಟನಾಗಿ 'ರಾಕ್ ಅನ್!!' ಚಿತ್ರದ ಮೂಲಕ ಪರಿಚಿತನಾಗುತ್ತಿರುವ ಚಿತ್ರ ನಿರ್ಮಾಪಕ ಫರಾನ್ ಅಖ್ತರ್ ಅವರಿಗೆ ನಟನೆ ನಿಜಕ್ಕೂ ಆನಂದದಾಯಕವಂತೆ.

ಚಿತ್ರದ ಹಾಡುಗಳ ಕ್ಯಾಸೆಟ್ ಬಿಡುಗಡೆಯ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ "ನಿರ್ಮಾಪಕ-ನಿರ್ದೇಶಕನಾಗಿ ಒಳ್ಳೆಯ ಯಶಸ್ಸು ಗಳಿಸಿರುವ ನಾನು ನಟನೆಯನ್ನು ಯಾಕೆ ಅರಿಸಿಕೊಂಡೆ ಎಂದು ಎಲ್ಲರೂ ಅಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ, ನಾನು ಪ್ರಶ್ನಿಸುತ್ತೇನೆ---ಯಾಕಾಗಬಾರದು?" ಎಂದರು ಫರಾನ್.

ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಜೊತೆಗೆ 'ರಾಕ್ ಅನ್!!' ಚಿತ್ರದಲ್ಲಿ ಫರಾನ್‌ರನ್ನು ನಟ ಹಾಗು ಗಾಯಕರಾಗಿಯೂ ಕಾಣಬಹುದು.

ತಮ್ಮ ಗಾಯಕ ಅವತಾರದ ಕುರಿತು ಪ್ರಶ್ನಿಸಿದಾಗ, ಫರಾನ್ ಚಿತ್ರದಲ್ಲಿ ತಾವು ರಾಕ್ ಸ್ಟಾರ್ ಪಾತ್ರ ನಿರ್ವಹಿಸುತ್ತಿದ್ದು ನಿರ್ದೇಶಕ ಅಭಿಷೇಕ್ ಕಪೂರ್ ಅವರು ನಾಯಕನೇ ಹಾಡುಗಳನ್ನು ಹಾಡಬೇಕೆಂದು ಬಯಸಿದ್ದು ಕಾರಣವೆಂದು ತಿಳಿಸಿದರು.

ಚಿತ್ರವನ್ನು ನಿರ್ದೇಶಿಸುತ್ತಿರುವ ಫರಾನ್ " ನಾವು ನನ್ನ ಹಾಡುಗಾರಿಕೆಯನ್ನು ಪ್ರಯತ್ನಿಸಿದೆವು, ಉತ್ತಮವಾಗಿದೆ ಅನ್ನಿಸುತು" ಎಂದರು.

ಚಿತ್ರ ತಯಾರಿಕೆ, ನಟನೆ ಮತ್ತು ಗಾಯನ ಬೇರೆ ಬೇರೆ ಮಟ್ಟದಲ್ಲಿ ತೃಪ್ತಿಯನ್ನು ನೀಡುತ್ತದೆ. "ಆದರೆ ನಾನು ನಿರ್ದೇಶನವನ್ನು ಎಂದಿಗೂ ಬಿಡುವುದಿಲ್ಲ ಎಂಬುದು ಸ್ಪಷ್ಟ" ಎಂದೂ ಸೇರಿಸಿದರು.

ಫರಾನ್ ಸಂಗೀತವನ್ನು ಅಭ್ಯಸಿಸುತ್ತಿಲ್ಲವಾದ್ದರಿಂದ 'ರಾಕ್ ಅನ್!!' ಚಿತ್ರಕ್ಕೆ ಸಂಗೀತ ನೀಡುತ್ತಿರುವ ಸಿಂಗರ್-ಕಂಪೊಸರ್ ಶಂಕರ್ ಮಹದೇವನ್‌ರೇ ಅವರ ಗಾಯನ ಗುರುವಂತೆ.

'ರಾಕ್ ಅನ್!!' ಚಿತ್ರದಲ್ಲಿ ಅಪರೂಪವೆನಿಸಬಲ್ಲ ವಿಶಿಷ್ಟ ಸಂಗೀತ ಅಳವಡಿಸಲಾಗಿದೆ ಎಂದು ಫರಾನ್ ತಿಳಿಸಿದ್ದಾರೆ.

ಫರಾನ್‌ರಿಂದ ನಿರ್ದೇಶಿತವಾಗಿರುವ 'ವಾಯ್ಸ ಪ್ರಮ್ ದ ಸ್ಕೈ' ನವೆಂಬರ್‌ನಲ್ಲಿ ಸೆಟ್ಟೇರಲಿದೆ. ಅವರು 'ಲಕ್ ಬೈ ಚಾನ್ಸ' ಎಂಬ ಇನ್ನೊಂದು ಚಿತ್ರವನ್ನು ಸಹ ನಿರ್ದೇಶಿಸಲಿದ್ದೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada