Article Bollywood Gossips %e0%b2%a8%e0%b2%9f %e0%b2%a8%e0%b3%80%e0%b2%b2%e0%b3%8d %e0%b2%87%e0%b2%a8%e0%b3%8d%e0%b2%a8%e0%b3%81 %e0%b2%ae%e0%b3%8d%e0%b2%af%e0%b3%82%e0%b2%b8%e0%b2%bf%e0%b2%95%e0%b3%8d %e0%b2%95%e0%b2%82%e0%b2%aa%e0%b3%8b%e0%b2%b8%e0%b2%b0%e0%b3%8d %e0%b2%85%e0%b2%82%e0%b2%a4 113061700032_1.htm

Daily Horoscope

Select Your Language

Notifications

webdunia
webdunia
webdunia
webdunia

ನಟ ನೀಲ್ ಇನ್ನು ಮ್ಯೂಸಿಕ್ ಕಂಪೋಸರ್ ಅಂತ

ಬಾಲಿವುಡ್
PR
PR
ಬಾಲಿವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ನಟ ನೀಲ್ ನಿತಿನ್ ಮುಕೇಶ್ ಅವರು. ಇದೀಗ ಮ್ಯೂಸಿಕ್ ಕಂಪೋಸರ್ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಪಾಯ್ದಾರ್ ಎಂಬ ಈ ಚಿತ್ರದಲ್ಲಿ ಹೊಸ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.

ಬಿನಯ್ಗಾಂಧಿ ನಿರ್ದೇಶನದ ಈ ಚಿತ್ರದಲ್ಲಿ ಐದು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ ನಿತಿನ್. ಗ್ರೇ ಮತ್ತು ಡಾಕರ್ ಸಿನೆಮಾಗಳಲ್ಲೇ ನಾನು ಹೆಚ್ಚಾಗಿ ನಟಿಸಿದ್ದು. ಹೊಸ ಚಿತ್ರದ ಹಾಡುಗಳಿಗೆ ಪ್ರೀತಿ-ಪ್ರೇಮದ ಹಾಡುಗಳು ಬೇಕಿದ್ದವು. ಪ್ರೀತಿ ಎಂಬ ಭಾವನೆಯಲ್ಲಿ ನನಗೆ ಸಂಪೂರ್ಣ ನಂಬಿಕೆಯಿರುವುದರಿಂದ ಈ ಚಿತ್ರದ ಹಾಡುಗಳನ್ನು ರಚಿಸಲು ಸಾಧ್ಯವಾಯಿತು ಎನ್ನುತ್ತಾರೆ ನಿತಿನ್.

ಹೇಳಿ ಕೇಳಿ ನಿತಿನ್ ಸಂಗೀತಗಾರರ ಕುಟುಂಬದ ಕುಡಿ. ಸಣ್ಣ ವಯಸ್ಸಿನಿಂದಲೇ ಪಿಯಾನೋ ಅಭ್ಯಸಿಸಿರುವ ನೀಲ್ ಶಾಸ್ತ್ರೀಯ ಸಂಗೀತದ ಹಿನ್ನೆಲೆಯನ್ನೂ ಹೊಂದಿದ್ದಾರೆ. ಪ್ರಸ್ತುತ ಶಾಟರ್ಕಟ್ ರೋಮಿಯೊ ಮತ್ತು ಇಶ್ಶೇರಿಯಾ ಚಿತ್ರದಲ್ಲಿ ಬ್ಯುಸಿಯಾಗಿರುವ ನೀಲ್ ಅದು ಪೂರ್ಣಗೊಂಡಿರುವ ಬಳಿಕವಷ್ಟೇ ಪಾಯ್ದಾರ್ ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

Share this Story:

Follow Webdunia kannada